May 20, 2022

Newsnap Kannada

The World at your finger tips!

hassan a

ಹಾಸನದಲ್ಲಿ ಭೀಕರ ಅಪಘಾತ; ಐವರು ವಿದ್ಯಾರ್ಥಿಗಳ ದುರಂತ ಸಾವು

Spread the love

KSRTC ಬಸ್​ ಮತ್ತು ಆಲ್ಟೊ ಕಾರ್ ನಡುವೆ ಭೀಕರ ಅಪಘಾತ ಪ್ರಕರಣದಲ್ಲಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಬೇಲೂರು ತಾಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಐವರು ವಿದ್ಯಾರ್ಥಿಗಳು ಬೇಲೂರಿನ ವಿದ್ಯಾವಿಕಾಸ್ ಕಾಲೇಜಿನವರು .

ಮಹಮ್ಮದ್ ಜಿಲಾನಿ (18), ಅಕ್ಮಲ್ ಖಾನ್, ಫಯಾಝ್ ಖಾನ್ ಸೇರಿ ಒಟ್ಟು ಐವರು ಸಾವನ್ನಪ್ಪಿದ್ದಾರೆ.

ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ದಾರಿಮಧ್ಯೆ ಅಂಬ್ಯುಲೆನ್ಸ್​ನಲ್ಲಿ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಬೇಲೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!