ಮಂಡ್ಯದಲ್ಲಿ ಶ್ವಾನ ಭವಿಷ್ಯ! ಎಚ್‍ಡಿಕೆ ಮುಂದಿನ ಸಿಎಂ

Team Newsnap
1 Min Read

ಮಂಡ್ಯ: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದರ ಬಗ್ಗೆ ಶ್ವಾನವೊಂದು ಭವಿಷ್ಯ ನುಡಿದಿದೆ.

ಫಿಫಾ ವಿಶ್ವಕಪ್‍ನಲ್ಲಿ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎಂದು
ಆಕ್ಟೋಪಸ್ ಹಾಗೂ ಹಂದಿ ಭವಿಷ್ಯ ನುಡಿದಿದ್ದನ್ನು ಕೇಳಿದ್ದೇವೆ.

ಈಗ ಮುಂದಿನ ಸಿಎಂ ಯಾರು ಎಂದು ಹೇಳುವ ಸರದಿ ಶ್ವಾನಕ್ಕೆ ಸಿಕ್ಕಿದೆ. ಎಚ್.ಡಿ. ಕುಮಾರಸ್ವಾಮಿ ಭಾವಚಿತ್ರ ತೆಗೆಯುವ ಮೂಲಕ ಶ್ವಾನ ಮುಂದಿನ ಮುಖ್ಯಮಂತ್ರಿ ಸುಳಿವು ನೀಡಿದೆ.

ಮಂಡ್ಯ ನಗರದ ಅಶೋಕನಗರದ ಗೋಪಿ ಎನ್ನುವರ ಭೈರವ ಹೆಸರಿನ ಶ್ವಾನವನ್ನು ಸಾಕಿದ್ದಾರೆ.

ಗೋಪಿ ಕಾಲಭೈರವನ ಭಕ್ತರು. ಪ್ರತಿ ಸೋಮವಾರ ಕಾಲಭೈರವನ ಪೂಜೆ ಮಾಡುತ್ತಾರೆ. ದೇವಸ್ಥಾನಕ್ಕೆ ಶ್ವಾನವನ್ನೂ ಕರೆದುಕೊಂಡು ಹೋಗುತ್ತಾರೆ. ಹಲವು ಬಾರಿ ಈ ಶ್ವಾನ ಭವಿಷ್ಯ ನುಡಿದಿದೆ ಎನ್ನಲಾಗಿದೆ.

ಪುನಿತ್ ರಾಜ್‍ಕುಮಾರ್ ಸಾಯುವ ಮುನ್ನ ಪ್ರತಿ ದಿನ ಅವರ ಪೋಟೊ ಹಿಡಿದುಕೊಳ್ಳುತ್ತಿತ್ತಂತೆ.
ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೂರು ಫೋಟೊ ಗಳನ್ನು ಮುಚ್ಚಿ ಇಟ್ಟು ಶ್ವಾನಕ್ಕೆ ಮುಂದಿನ ಸಿಎಂ ಯಾರು ಎಂದು ಕೇಳಿದ್ದಾರೆ.ಮಂಡ್ಯ ಸಮೀಪ ಕಾಲುವೆಯಲ್ಲಿ ಈಜಲು ಹೋಗಿ ಬೆಂಗಳೂರಿನ ಐವರು ಜಲ ಸಮಾಧಿ

ಆಗ ಶ್ವಾನ ಎಚ್.ಡಿ. ಕುಮಾರಸ್ವಾಮಿ ಫೋಟೊ ಅನ್ನು ಎತ್ತಿ ತಂದು ತೋರಿಸಿದೆ.

Share This Article
Leave a comment