February 21, 2026

Newsnap Kannada

The World at your finger tips!

WhatsApp Image 2022 01 19 at 12.36.13 PM

ಗುರುವನ್ನು ಬಿಡುಗಡೆಮಾಡಿಸಲು ಹೋಗಿ ಗಾಂಜಾ ಮಾರಿ ಬಂಧನಕ್ಕೆ ಒಳಗಾದ ರೌಡಿ ರಾಹುಲ್ ಶಿಷ್ಯರು

Spread the love

ಬೆಂಗಳೂರಿನ ರೌಡಿಶೀಟರ್​ ರಾಹುಲ್ ಅಲಿಯಾಸ್​ ಸ್ಟಾರ್ ರಾಹುಲ್ ನನ್ನು ಜೈಲಿನಿಂದ ರಿಲೀಸ್​ ಮಾಡಿಸೋಕೆ ಗಾಂಜಾ ಮಾರಾಟಕ್ಕೆ ಇಳಿದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ

ರೌಡಿಶೀಟರ್​ ರಾಹುಲ್ ನನ್ನು ಶೂಟ್ ಮಾಡಿ ಪೊಲೀಸರು ಕಂಬಿ ಹಿಂದೆ ನಿಲ್ಲಿಸಿದ್ದರು. ಈ ವೇಳೆ ತಮ್ಮ ಗುರುವನ್ನು ಬಿಡಿಸಲು ಶಿಷ್ಯರಾದ ಕಿರಣ್,ಮಂಜು,ಕಾರ್ತಿಕ್​ಗೆ ಹಣದ ಅವಶ್ಯಕತೆ ಎದುರಾಗಿತ್ತು.

ರಾಹುಲ್​ ಅರೆಸ್ಟ್ ಆದ ಮಾರನೇ ದಿನವೇ ಗಾಂಜಾ ಮಾರಾಟಕ್ಕೆ ಇಳಿದ ಇವರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ.

ಕುಳ್ಳ ರಿಜ್ವಾನ್, ಗುಡ್ಡೆ ಭರತ ಆಂಧ್ರದಿಂದ ಕಳಿಸಿದ 20 ಕೆಜಿ ಗಾಂಜಾ ಪಡೆದು ಆರೋಪಿಗಳು ಕೆ.ಆರ್.ರಸ್ತೆಯಲ್ಲಿ ಮಾರಾಟಕ್ಕೆ ತೊಡಗಿದ್ದರು.

ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮೂವರನ್ನು ಬಂಧಿಸಿದರು. ಬಂಧಿತರಿಂದ 20 ಕೆಜಿ ಮೌಲ್ಯದ ಗಾಂಜಾ,ಒಂದು ಕಾರು ಒಂದು ಲಾಂಗ್ ವಶಕ್ಕೆ ಪಡೆದಿದ್ದಾರೆ.

ಕುಳ್ಳ ಗುರು ಮತ್ತು ಗುಡ್ಡೆ ಭರತ್ ಮಾತ್ರ​ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಐವರ ವಿರುದ್ಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!