ಗಾಂಜಾ ಮಾರಾಟ : ಬಂಧಿತ ಪೇದೆಗಳ ಮೊಬೈಲ್​ ರಿಟ್ರೀವ್ ಗೆ ತನಿಖಾಧಿಕಾರಿಗಳು ತಯಾರಿ

Team Newsnap
1 Min Read
Drug trafficking case – 42 students of Manipal University suspended ಡ್ರಗ್ಸ್ ದಂಧೆ ಕೇಸ್ – ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೇದೆಗಳು ಗಾಂಜಾ ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿ, ತನಿಖಾಧಿಕಾರಿಗಳು ಆ ಇಬ್ಬರು ಪೇದೆಗಳ ಮೊಬೈಲ್  ರಿಟ್ರೀವ್​ ಮಾಡಲು ತಯಾರಿ ಮಾಡಿದ್ದಾರೆ.

ಆರೋಪಿ ಪೋಲಿಸ್ ಗಳಾದ ಶಿವಕುಮಾರ್ ಹಾಗೂ ಸಂತೋಷ್ ಡ್ರಗ್​ ಪೆಡ್ಲರ್ ಗಳ ಜೊತೆ ಸಂಪರ್ಕದ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುತ್ತಿದೆ.

ಜೊತೆಗೆ ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್ ಬಳಿ ಮಾತ್ರವಲ್ಲದೇ ಇನ್ನೂ ಸಾಕಷ್ಟು ಪೆಡ್ಲರ್ ಗಳ ಜೊತೆ ಆರೋಪಿಗಳು ಸಂಪರ್ಕ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ

ಇಬ್ಬರ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಮಾಡಲು ಮುಂದಾದ ಪೊಲೀಸರು, ಆರೋಪಿಗಳು ಪೆಡ್ಲರ್​ಗಳ ಜೊತೆ ಯಾವಾಗಿನಿಂದ ಸಂಪರ್ಕ ಹೊಂದಿದ್ದರು..? ಇವರೆಗೂ ಎಷ್ಟು ಬಾರಿ ಡ್ರಗ್ಸ್ ತರಿಸಿಕೊಂಡಿದ್ರೂ ಎನ್ನುವುದರ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.?

ಯಾರಿಗೆಲ್ಲ ಇವರು ಗಾಂಜಾ ಸರಬರಾಜು ಮಾಡ್ತಿದ್ದರು ಜೊತೆಗೆ ಇವರ ಜೊತೆ ನಿಕಟ ಸಂಪರ್ಕ ಹೊಂದಿದವರು ಯಾರು ಎನ್ನುವುದರ ಬಗ್ಗೆಯೂ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article
Leave a comment