December 24, 2024

Newsnap Kannada

The World at your finger tips!

80066676

ರಾಜ್ಯದ 5 ಜಿಲ್ಲೆಗಳಲ್ಲಿ ಇಂದು ಕೊರೋನಾ ಲಸಿಕೆ ಡ್ರೈ ರನ್

Spread the love

ಕೇಂದ್ರ ಸರ್ಕಾರ ಸೂಚನೆಯಂತೆ ದೇಶದ 4 ರಾಜ್ಯಗಳಲ್ಲಿನ 116 ಜಿಲ್ಲೆಗಳಲ್ಲಿ ಕೊರೋನಾ ಲಸಿಕೆ ವಿತರಣೆ ಶನಿವಾರ ಬೆಳಿಗ್ಗೆಯಿಂದ ಆರಂಭವಾಗಿದೆ.

ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದಂತೆ ಕರ್ನಾಟಕದ 5 ಐದು ಜಿಲ್ಲೆಗಳಲ್ಲಿ ಇಂದಿನಿಂದಲೇ ಕೊರೋನಾ ಲಸಿಕೆ ವಿತರಣೆಯ ತಾಲೀಮು ಕೂಡ ಆರಂಭವಾಗಿದೆ.

ರಾಜ್ಯದ ಬೆಂಗಳೂರು ನಗರ, ಶಿವಮೊಗ್ಗ, ಕಲಬುರ್ಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ಕೊರೋನಾ ಲಸಿಕೆ ವಿತರಣೆಯ ಆಗಲಿದೆ.

ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಮಟ್ಟದಲ್ಲಿ 1, ತಾಲೂಕು ಮಟ್ಟದಲ್ಲಿ 1 ಲಸಿಕಾ ಕೇಂದ್ರಗಳನ್ನು ತೆರೆಯಲಿದೆ. ಅಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈರನ್ ಇರಲಿದೆ.

ಮೊದಲ ಹಂತವಾಗಿ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಾರಿಯರ್ಸ್ ಗಳಿಗೆ ಲಸಿಕೆಯನ್ನು ಆದ್ಯತೆಮೇರೆಗೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಈಗಾಗಲೇ ಈ ಬಗ್ಗೆ ಸಿದ್ಧತೆಗಳು ಬಹಳ ಹೆಚ್ಚು ನಡೆದಿರುವುದರಿಂದ ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 25 ಜನರಿಗೆ ಕೊಡುವಂತ ಕಾರ್ಯ ನಡೆಯಲಿದೆ. ಕಲಬುರ್ಗಿ, ಮೈಸೂರು, ಶಿವಮೊಗ್ಗ, ಬೆಳಗಾವಿ ಮತ್ತು ಬೆಂಗಳೂರು ನಗರದಲ್ಲಿ ಮಾಕ್ ಟ್ರೈಲ್ ನಡೆಯಲಿದೆ. ಲಸಿಕೆ ಬಂದ ನಂತರ, ಹೆಸರು ನೊಂದಾಯಿಸಿಕೊಂಡಂತಹ ಜನರಿಗೆ ಲಸಿಕೆ ನೀಡಲಾಗುತ್ತದೆ. ಅಧಿಕೃತವಾಗಿ ಲಸಿಕೆ ಕೊಡುವ ಮೊದಲು ನಮ್ಮ ಸಿದ್ದತೆಗಳು ಯಾವರೀತಿಯಲ್ಲಿ ಇದ್ದಾವೆ. ಎಲ್ಲವೂ ಸರಿಯಾಗಿದ್ದಾವೇ ಎನ್ನುವ ಬಗ್ಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ

70 ಮಂದಿ ಇನ್ನೂ ಪತ್ತೆಯಾಗಿಲ್ಲ :

ಈ ನಡುವೆ ಯುಕೆಯಿಂದ ಬಂದಂತ ಪ್ರಯಾಣಿಕರು ನ.29ರವರೆಗೆ 5068 ಜನರು. 4238 ಜನರು ಡಿ.9ರಿಂದ ಬಂದಂತವರು. 810 ಜನರು ಹೊರ ರಾಜ್ಯದ ಪ್ರಯಾಣಿಕರು. ಆಯಾ ರಾಜ್ಯಗಳಿಗೆ 810 ಜನರ ಮಾಹಿತಿ ನೀಡಿದ್ದೇವೆ. ಇನ್ನೂ 75 ಜನರ ಮಾಹಿತಿ ಪತ್ತೆಯಾಗಬೇಕಿದೆ. ಇಂದು ಸಂಜೆಯೊಳಗೆ 75 ಜನರನ್ನು ಪತ್ತೆ ಹಚ್ಚಲಾಗುತ್ತದೆ ಎಂಬುದಾಗಿ ಗೃಹ ಇಲಾಖೆ ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 70 ಜನರು ಪತ್ತೆಯಾಗಬೇಕಿದೆ.

ಇದುವರೆಗೆ ಯುಕೆಯಿಂದ ರಾಜ್ಯಕ್ಕೆ ಬಂದಂತ 33 ಜನರ ವರದಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಲ್ಲಿ ಐವರು ಸಂಪರ್ಕಿತರು ಸೇರಿದಂತೆ 38 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ. ನಿಮಾನ್ಸ್ ನಲ್ಲಿ ಮತ್ತೊಮ್ಮೆ ಯುಕೆ ರೂಪಾಂತರ ವೈರಸ್ ಕಾರ್ಯ ಪತ್ತೆ ಹಚ್ಚಲಾಗಿದೆ. 7 ಜನರ ವರದಿ ರೂಪಾಂತರ ವೈರಸ್ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿದೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!