ಮಂಡ್ಯದ ಪತ್ರಕರ್ತ ಕೆ. ಸಿ. ವಿಶ್ವನಾಥ್ ನಿಧನ

Team Newsnap
1 Min Read

ಹಿರಿಯ ಪತ್ರಕರ್ತ ಕೆ.ಸಿ. ವಿಶ್ವನಾಥ್ ಶಾಸ್ತ್ರಿ(54). (ಕೆ ಸಿ ರಮೇಶ್ ಸಹೋದರ) ಇಂದು ಬೆಳಿಗ್ಗೆ ಮೈಸೂರಿನ ನಾರಾಯಣಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ನಿಧನರಾದರು.

ಸಹೋದರ ಕೆ.ಸಿ.ರಮೇಶ್ ನಿಧನದ ನಂತರ ವಿಶ್ವನಾಥ್ ಈ ಸಂಜೆ ಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು.

ಮೊನ್ನೆ ಬೆಳಿಗ್ಗೆ ಎದೆನೋವಿನಿಂದಾಗಿ ಮಂಡ್ಯದ ಪ್ರಶಾಂತ್ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲಾಗಿತ್ತು. ಶುಕ್ರವಾರ ಆಂಜಿಯೋಪ್ಲಾಸ್ಟಿ ಸರ್ಜರಿಯನ್ನೂ ಕೂಡ ಮಾಡಲಾಗಿತ್ತು.

ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ವಿಶ್ವನಾಥ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

12 . 30ಕ್ಕೆ‌ ಮಂಡ್ಯ ಕ್ಕೆ ಪಾರ್ಥಿವ ಶರೀರ:

ವಿಶ್ವನಾಥ್ ಶಾಸ್ತ್ರಿ ಪಾರ್ಥಿವ ಶರೀರವನ್ನು ಮಂಡ್ಯ ನಗರಕ್ಕೆ ಇಂದು 12.30 ಗಂಟೆಗೆ ತರಲಾಗುತ್ತದೆ.
ಮಂಡ್ಯ ಕೆರೆಯಂಗಳದ ವಿವೇಕಾನಂದನಗರ 1ನೇ ಬ್ಲಾ ಕ್ ನಲ್ಲಿನ ಅವರ ನಿವಾಸದಲ್ಲಿ (ಕೊಬ್ಬರಿ ಮಂಡಿ ಬಳಿ) ಪಾರ್ಥಿವ ಶರೀರವನ್ನು ಸಾರ್ವಜನಿಕರ ಆಂತಿಮದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಪತ್ರಕರ್ತರ ಕಂಬನಿ:

ವಿಶ್ವನಾಥ್ ಶಾಸ್ತ್ರಿ ನಿಧನಕ್ಕೆ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ , ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಉಪಾಧ್ಯಕ್ಷ ಬಿ ಪಿ ಪ್ರಕಾಶ್, ಹಿರಿಯ ಪತ್ರಕರ್ತರಾದ‌ ಕೆ. ಎನ್. ರವಿ, ಪಿ. ಜೆ. ಚೈತನ್ಯ ಕುಮಾರ್ , ಮತ್ತಿಕೆರೆ ಜಯರಾಂ, ಕೆ. ಸಿ. ಮಂಜುನಾಥ್, ಕೆ. ಎನ್. ನವೀನ್ ಕುಮಾರ್ , ಐಡಿಯಲ್ ಪ್ರಕಾಶ್, ಡಿ ಎಲ್ ಲಿಂಗರಾಜು, ಸೋಮಶೇಖರ್ ಕೆರಗೋಡು ನಾಗೇಶ್ , ಶ್ರೀನಿವಾಸ್ , ರಾಘವೇಂದ್ರ, ಮಾದರಹಳ್ಳಿ ರಾಜು, ಪುಟ್ಟ ಲಿಂಗಣ್ಣ, ವೆಂಕಟೇಶ್, ಸುನೀಲ್. ಆನಂದ್ , ನಂದನ್ ಸೇರಿದಂತೆ ಅಪಾರ ಪತ್ರಕರ್ತರ ಬಳಗ ಕಂಬನಿ ಮಿಡಿದಿದೆ.

Share This Article
Leave a comment