ಗುತ್ತಿಗೆಯ ಆಧಾರದಲ್ಲಿ 300 ಎಲೆಕ್ಟ್ರಿಕ್ ‌ ಬಸ್ ಓಡಿಸಲು ಬಿಎಂಟಿಸಿ ಸಿದ್ದತೆ

Team Newsnap
1 Min Read

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಒಂದು ವರ್ಷದಲ್ಲಿ ಬೆಂಗಳೂರಿನ ರಸ್ತೆ ಗಳಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಮಾಡುವುದನ್ನು ನೋಡಬಹುದು.

ಈಗಾಗಲೇ ಗುತ್ತಿಗೆ ಆಧಾರದಲ್ಲಿ 300 ಬಸ್ ಗಳನ್ನು ಓಡಿಸಲು ಕರೆಯಲಾಗಿದ್ದ ಟೆಂಡರ್ ನಲ್ಲಿ 4 ಕಂಪನಿಗಳು ಪಾಲ್ಗೊಂಡಿವೆ. ಕೇಂದ್ರದ ಫ್ರೇಮ್ 2 ಅನುದಾನ ಬಳಕೆ ಮಾಡಿಕೊಂಡು 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಪಡೆಯಲು ಬಿಎಂಟಿಸಿ ಸಿದ್ದತೆ ಮಾಡಿಕೊಂಡಿದೆ.

ಎಲೆಕ್ಟ್ರಿಕ್ ಬಸ್ ಗುತ್ತಿಗೆ ನೀಡಲು ಟಾಟಾ, ಗ್ರೀನ್‌ ಟೆಕ್, ವೀರ್ ವಾಹನ್. ಅಶೋಕಾ ಲೇಲ್ಯಾಂಡ್ ಕಂಪನಿಗಳು ಟೆಂಡರ್ ನಲ್ಲಿ ಪಾಲ್ಗೊಂಡಿವೆ. ಎಲ್ಲಾ ಕಂಪನಿಗಳ ದಾಖಲಾತಿ ಕೂಡ ಪರಿಶೀಲನೆ ನಡೆದಿದೆ.

ಈ ಹಿಂದೆ ಎರಡು ಬಾರಿ ಕೆಲವು ಕಾರಣದಿಂದಾಗಿ ಟೆಂಡರ್ ಪ್ರಕ್ರಿಯೆ ರದ್ದಾಗಿತ್ತು. ಇದು ಮೂರನೇ ಬಾರಿ ಟೆಂಡರ್ ಕರೆಯಲಾಗಿದೆ. ಒಲೆಕ್ಟ್ರಾ ಗ್ರೀನ್ ಟೆಕ್ ಕಂಪನಿ‌ಯ ಎಲೆಕ್ಟ್ರಿಕ್ ಬಸ್ ಗಳು 30 ಮಾರ್ಗಗಳಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರ ಮಾಡಿವೆ. ಅಲ್ಲದೇ ಇನ್ನೂ ಎರಡು ಕಂಪನಿಗಳು ಪ್ರಾಯೋಗಿಕ ಸಂಚಾರಕ್ಕೆ ಮುಂದೆ ಬಂದಿವೆ ಎಂದು ಬಿಎಂಟಿಸಿ ನಿಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲಾ ಪೂರ್ವ ತಯಾರಿಗಳು ಸುಲಲಿತವಾಗಿ ಪೂರ್ಣಗೊಂಡರೆ ಮುಂದಿನ ವರ್ಷದೊಳಗೆ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ನಲ್ಲೇ ಸಂಚಾರ ಮಾಡಬಹುದು.

Share This Article
Leave a comment