October 23, 2021

Newsnap Kannada

The World at your finger tips!

ಶ್ರೀನಗರ – ಶಾಲೆ ಮೇಲೆ ಉಗ್ರರ ದಾಳಿ:ಪ್ರಿನ್ಸಿಪಾಲ್,ಶಿಕ್ಷಕ ಹತ್ಯೆ- ಮತ್ತಿಬ್ಬರಿಗೆ ಗಾಯ

Spread the love

ಕಾಶ್ಮೀರ ಕಾಣಿವೆಯಲ್ಲಿ ಅಲ್ಪ ಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ.

ಉಗ್ರರು ನಡೆಸಿದ ದಾಳಿಯಲ್ಲಿ ಗುರುವಾರ ಶಾಲಾ ಪ್ರಾಂಶುಪಾಲ ಹಾಗೂ ಶಿಕ್ಷಕ ಗುಂಡಿಗೆ ಬಲಿಯಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಅಲ್ಪ ಸಂಖ್ಯಾತರ ಗುರಿಯಾಗಿಸಿ ಮಂಗಳವಾರ ನಡೆದಿದ್ದ ದಾಳಿಯಲ್ಲಿ ಮೂವರು ನಾಗರಿಕರು ಉಗ್ರರ ಗುಂಡಿಗೆ ಬಲಿಯಾಗಿದ್ದರು.

ಶ್ರೀನಗರದ ಸಂಗಮ್​​​ ಸ್ಕೂಲ್​​ ಪ್ರಾಂಶುಪಾಲೆ ಸತೀಂದರ್ ಕೌರ್​, ಶಿಕ್ಷಕ ದೀಪಕ್​ ಚಾಂದ್​ ಮೃತ ದುರ್ದೈವಿಗಳಾಗಿದ್ದಾರೆ. ಉಗ್ರರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸಾಗಿರುವ ವೇಳೆಗೆ ಸಾವನ್ನಪ್ಪಿದ್ದರು.

ಈ ಘಟನೆಯಲ್ಲಿ ಮತ್ತಿಬ್ಬರು ನಾಗರೀಕರು ಗಾಯಗೊಂಡಿದ್ದಾರೆ.

error: Content is protected !!