February 8, 2023

Newsnap Kannada

The World at your finger tips!

mobile , crime , suicide

Boy committed suicide by hanging himself because he was not allowed to see his mobile ಮೊಬೈಲ್ ನೋಡಲು ಬಿಡಲಿಲ್ಲವೆಂದು ನೇಣು ಬಿಗಿದು ಬಾಲಕ ಆತ್ಮಹತ್ಯೆ

ಬೆಂಗಳೂರಿನಲ್ಲಿ ಭಯಾನಕ ಘಟನೆ :ಕಾರಿನ ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

Spread the love

ಬೆಂಗಳೂರಿನ ಯುವತಿಯೊಬ್ಬಳು ಜ್ಞಾನಭಾರತಿಯ ಉಲ್ಲಾಳ ರಸ್ತೆಯ ಮಂಗಳೂರು ಕಾಲೇಜ್ ಬಳಿ ನೆಕ್ಸನ್ ಕಾರಿನ ಬಾನೆಟ್ ಮೇಲೆ ಎರಡು ಕಿಲೋಮೀಟರ್ ಬೈಕ್ ಸವಾರ ಸುತ್ತಾಡಿದ್ದಾನೆ. ಈ ಕಾರು ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ.

ಕಳೆದ ವಾರ ಮಾಗಡಿ ರಸ್ತೆಯಲ್ಲಿ ಬೈಕ್ ನಲ್ಲಿ ವೃದ್ಧನನ್ನು ಎಳೆದೊಯ್ದ ಭೀಕರ ಘಟನೆ ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದೆ.ಮಂಗಳೂರು ಡ್ರಗ್ಸ್ ದಂಧೆ – ಕೆಎಂಸಿ ಆಸ್ಪತ್ರೆಯ ವೈದ್ಯರು ವಜಾ, ವಿದ್ಯಾರ್ಥಿಗಳು ಅಮಾನತು

ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿಗೆ ಮಹಿಳೆಯೊಬ್ಬಳು ನೆಕ್ಸನ್ ಕಾರನ್ನು ಓಡಿಸುತ್ತಿದ್ದು, ರೆಡ್‌ ಸಿಗ್ನಲ್‌ ಇದ್ದರೂ ಕಾರನ್ನು ತಂದು ಅಡ್ಡ ನಿಲ್ಲಿಸಿದ್ದಳು. ಈ ವೇಳೆ ಸಿಗ್ನಲ್‌ ಇರುವುದು ಕಾಣಿಸಲ್ವಾ ಎಂದು ಬೈಕ್‌ ಸವಾರ ಕೇಳಿದ್ದಕ್ಕೆ ಆಕೆ ಮಧ್ಯದ ಬೆರಳು  ತೋರಿಸಿ ಎಸ್ಕೇಪ್ ಆಗುತ್ತಿದ್ದಳು.


ಈ ವೇಳೆ ಕಾರಿನ ಬಾನೆಟ್ ಮೇಲೆ ಹತ್ತಿ ಬೈಕ್ ಸವಾರ ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

accident , car , man
Terrible incident in Bengaluru: Driver drags passenger on bonnet of car ಬೆಂಗಳೂರಿನಲ್ಲಿ ಭಯಾನಕ ಘಟನೆ :ಕಾರಿನ ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ

ಆದರೆ ಮಹಿಳೆ ಕಾರು ನಿಲ್ಲಿಸದೇ, ಮಂಗಳೂರು ಕಾಲೇಜಿನಿಂದ ಎರಡು ಕಿಲೋಮೀಟರ್ ಕಾರನ್ನು ವೇಗವಾಗಿ ಓಡಿಸಿದ್ದಾಳೆ.

ಬೈಕ್ ಸವಾರನ ಪರದಾಟ ನೋಡಿ ಸ್ಥಳೀಯರು ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ. ಬಳಿಕ ಕಾರು ಜಖಂ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ಸ್ಥಳೀಯರು ಕಾರು ತಂದಿದ್ದಾರೆ. ಸದ್ಯ ಎರಡೂ ಕಡೆಯವರನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!