ಮಂಗಳೂರು ಡ್ರಗ್ಸ್ ದಂಧೆ – ಕೆಎಂಸಿ ಆಸ್ಪತ್ರೆಯ ವೈದ್ಯರು ವಜಾ, ವಿದ್ಯಾರ್ಥಿಗಳು ಅಮಾನತು

Team Newsnap
1 Min Read
Mangalore drug racket - KMC hospital doctors sacked, students suspended ಮಂಗಳೂರು ಡ್ರಗ್ಸ್ ದಂಧೆ – ಕೆಎಂಸಿ ಆಸ್ಪತ್ರೆಯ ವೈದ್ಯರು ವಜಾ, ವಿದ್ಯಾರ್ಥಿಗಳು ಅಮಾನತು

ನಗರದಲ್ಲಿ ವೈದ್ಯರ ಡ್ರಗ್ಸ್ ಜಾಲ ಪ್ರಕರಣದಲ್ಲಿ (Drug Peddling) ಸಿಕ್ಕಿಬಿದ್ದ ಇಬ್ಬರು ವೈದ್ಯರು (Doctors) ಹಾಗೂ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು (Medical Students) ಕೆಎಂಸಿ ಆಸ್ಪತ್ರೆಯ (KMC Hospital) ಆಡಳಿತ ಮಂಡಳಿ ಅಮಾನತು ಮಾಡಿದೆ.

ಅತ್ತಾವರ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ. ಸಮೀರ್, ಮೆಡಿಕಲ್ ಸರ್ಜನ್ ಡಾ. ಮಣಿಮಾರನ್ ಮುತ್ತು ಅಮಾನತಾಗಿರುವ ವೈದ್ಯರು. ಡಾ. ಕಿಶೋರಿಲಾಲ್, ಡಾ. ನದೀಯಾ ಸಿರಾಜ್, ಡಾ. ವರ್ಷಿಣಿ ಪತ್ರಿ, ಡಾ. ರಿಯಾ ಚಡ್ಡ, ಡಾ. ಇರಾ ಬಾಸಿನ, ಡಾ. ಕ್ಷಿತಿಜ್ ಗುಪ್ತಾ, ಡಾ. ಹರ್ಷ ಕುಮಾರ್ ವಿ.ಎಸ್. ಅಮಾನತು ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳು.

ಮಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿರುವ ಕೆಎಂಸಿ ಡೀನ್ ಉನ್ನಿಕೃಷ್ಣನ್ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಬಗ್ಗೆ ಪೊಲೀಸ್ ಕಮಿಷನರ್‌ಗೆ ಮಾಹಿತಿ ನೀಡಿದ್ದಾರೆ.ಕೌಟುಂಬಿಕ ಗಲಾಟೆ: ಮಾಲೂರಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

Share This Article
Leave a comment