ಬೆಂಗಳೂರಿನ ಯುವತಿಯೊಬ್ಬಳು ಜ್ಞಾನಭಾರತಿಯ ಉಲ್ಲಾಳ ರಸ್ತೆಯ ಮಂಗಳೂರು ಕಾಲೇಜ್ ಬಳಿ ನೆಕ್ಸನ್ ಕಾರಿನ ಬಾನೆಟ್ ಮೇಲೆ ಎರಡು ಕಿಲೋಮೀಟರ್ ಬೈಕ್ ಸವಾರ ಸುತ್ತಾಡಿದ್ದಾನೆ. ಈ ಕಾರು ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ.
ಕಳೆದ ವಾರ ಮಾಗಡಿ ರಸ್ತೆಯಲ್ಲಿ ಬೈಕ್ ನಲ್ಲಿ ವೃದ್ಧನನ್ನು ಎಳೆದೊಯ್ದ ಭೀಕರ ಘಟನೆ ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದೆ.ಮಂಗಳೂರು ಡ್ರಗ್ಸ್ ದಂಧೆ – ಕೆಎಂಸಿ ಆಸ್ಪತ್ರೆಯ ವೈದ್ಯರು ವಜಾ, ವಿದ್ಯಾರ್ಥಿಗಳು ಅಮಾನತು
ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿಗೆ ಮಹಿಳೆಯೊಬ್ಬಳು ನೆಕ್ಸನ್ ಕಾರನ್ನು ಓಡಿಸುತ್ತಿದ್ದು, ರೆಡ್ ಸಿಗ್ನಲ್ ಇದ್ದರೂ ಕಾರನ್ನು ತಂದು ಅಡ್ಡ ನಿಲ್ಲಿಸಿದ್ದಳು. ಈ ವೇಳೆ ಸಿಗ್ನಲ್ ಇರುವುದು ಕಾಣಿಸಲ್ವಾ ಎಂದು ಬೈಕ್ ಸವಾರ ಕೇಳಿದ್ದಕ್ಕೆ ಆಕೆ ಮಧ್ಯದ ಬೆರಳು ತೋರಿಸಿ ಎಸ್ಕೇಪ್ ಆಗುತ್ತಿದ್ದಳು.
ಈ ವೇಳೆ ಕಾರಿನ ಬಾನೆಟ್ ಮೇಲೆ ಹತ್ತಿ ಬೈಕ್ ಸವಾರ ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಆದರೆ ಮಹಿಳೆ ಕಾರು ನಿಲ್ಲಿಸದೇ, ಮಂಗಳೂರು ಕಾಲೇಜಿನಿಂದ ಎರಡು ಕಿಲೋಮೀಟರ್ ಕಾರನ್ನು ವೇಗವಾಗಿ ಓಡಿಸಿದ್ದಾಳೆ.
ಬೈಕ್ ಸವಾರನ ಪರದಾಟ ನೋಡಿ ಸ್ಥಳೀಯರು ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ. ಬಳಿಕ ಕಾರು ಜಖಂ ಮಾಡಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ಸ್ಥಳೀಯರು ಕಾರು ತಂದಿದ್ದಾರೆ. ಸದ್ಯ ಎರಡೂ ಕಡೆಯವರನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು