December 23, 2024

Newsnap Kannada

The World at your finger tips!

accident , death , road

Terrible accident in Belgaum - ASI's wife and daughter died tragically ಬೆಳಗಾವಿಯಲ್ಲಿ ಭೀಕರ ಅಪಘಾತ- ASI ಪತ್ನಿ, ಪುತ್ರಿ ಸೇರಿ ನಾಲ್ವರ ದುರಂತ ಸಾವು

ಬೆಳಗಾವಿಯಲ್ಲಿ ಭೀಕರ ಅಪಘಾತ- ASI ಪತ್ನಿ, ಪುತ್ರಿ ಸೇರಿ ನಾಲ್ವರ ದುರಂತ ಸಾವು

Spread the love

ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕುಡಚಿ ಪೊಲೀಸ್ ಠಾಣೆಯ ಎಎಸ್‌ಐ ವೈ.ಎಂ.ಹಲಕಿಯವರ ಪತ್ನಿ, ಪುತ್ರಿ ಹಾಗೂ ಚಾಲಕ, ಅಜ್ಜಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ

ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುದಿಗೊಪ್ಪ ಕ್ರಾಸ್ ಬಳಿ ನಡೆದಿದೆ.ಮಂಡ್ಯ ರೈತರಿಂದಲೂ ಪೇ ಫಾರ್ಮರ್ ಅಭಿಯಾನ : ಟನ್ ಕಬ್ಬಿಗೆ 4500 ರು ಕೊಡಿ – ರೈತರ ಒತ್ತಾಯ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ಸ್ವಿಫ್ಟ್ ಡಿಸೈರ್ ಕಾರು, ಬೈಕ್ ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪಿದ್ದಾರೆ.

ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಯರಗಟ್ಟಿಯತ್ತ ತೆರಳುತ್ತಿದ್ದ ಎಎಸ್‌ಐ ಕುಟುಂಬದಲ್ಲಿ ಮೂವರು ಮೃತರಾಗಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದ ಓರ್ವ ಅಜ್ಜಿ ಸಾವನ್ನಪ್ಪಿದ್ದಾರೆ. ಇನ್ನು ಲಾರಿ ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್, ಮುರಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!