ಶಿವಮೊಗ್ಗ : ನೀರಿನ ತೊಟ್ಟಿಗೆ ಬಿದ್ದ ಮಗು ಸಾವು

Team Newsnap
1 Min Read
Shimoga: Child dies after falling into water tank ಶಿವಮೊಗ್ಗ : ನೀರಿನ ತೊಟ್ಟಿಗೆ ಬಿದ್ದ ಮಗು ಸಾವು

ನೀರಿನ ತೊಟ್ಟಿಯಲ್ಲಿ ಅಂಬೇಗಾಲು ಇಡುತ್ತಲೇ ನೀರಿನ ತೊಟ್ಟಿಗೆ ಬಿದ್ದ ಮಗೊಂದು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಜರುಗಿದೆ.

ಅಕ್ಷಯ್ (11 ತಿಂಗಳು) ಮೃತಪಟ್ಟ ಮಗು.ದೇವರಾಜ್ ಹಾಗೂ ಅನುಷಾ ಈ ಮಗುವಿನ ಅಪ್ಪ ಅಮ್ಮ.ಬೆಳಗಾವಿಯಲ್ಲಿ ಭೀಕರ ಅಪಘಾತ- ASI ಪತ್ನಿ, ಪುತ್ರಿ ಸೇರಿ ನಾಲ್ವರ ದುರಂತ ಸಾವು

ಮಹಾಲಯ ಅಮವಾಸ್ಯೆ ಇದ್ದ ಕಾರಣ ಕುಟುಂಬಸ್ಥರು ವಾಹನ ತೊಳೆಯಲು ಪೂಜೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ 11 ತಿಂಗಳ ಮಗುವು ಅಂಬೆಗಾಲು ಇಡುತ್ತಾ ಅರಿವಿಲ್ಲದಂತೆ ತೊಟ್ಟಿಗೆ ಬಿದಿದ್ದೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ತಾತ ವಾಹನ ತೊಳೆಯಲು ಬಂದಾಗ ಮಗುವನ್ನು ನೋಡಿದ್ದಾರೆ.

ಕೂಡಲೇ ಮಗುವನ್ನು ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ.

ಇನ್ನು, ಮೃತ ಮಗುವಿನ ಹುಟ್ಟುಹಬ್ಬವು ಮುಂದಿನ ವಾರವೇ ಇತ್ತು.

ಮಗುವಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಯೋಚಿಸಿದ್ದ ಮನೆಯಲ್ಲೀಗ ನೀರವ ಮೌನ ಆವರಿಸಿದೆ.

Share This Article
Leave a comment