February 7, 2023

Newsnap Kannada

The World at your finger tips!

Farmer , Subsidy , Fertilizer

Center has cut subsidy on fertilizers ರಸಗೊಬ್ಬರಗಳ ಮೇಲಿನ ಸಬ್ಸಿಡಿ ಕಡಿತ ಮಾಡಿದ ಕೇಂದ್ರ

ಮಂಡ್ಯ ರೈತರಿಂದಲೂ ಪೇ ಫಾರ್ಮರ್ ಅಭಿಯಾನ : ಟನ್ ಕಬ್ಬಿಗೆ 4500 ರು ಕೊಡಿ – ರೈತರ ಒತ್ತಾಯ

Spread the love

ರಾಜ್ಯದಲ್ಲಿ ಈಗ ಪೇ ಸಿಎಂ ಪೋಸ್ಟರ್ ಭಾರೀ ಸದ್ದ್ದಿನ ನಡುವೆಮಂಡ್ಯದ ರೈತರು ಪೇ ಫಾರ್ಮಾರ್ (Pay Farmer) ಅಭಿಯಾನ ಆರಂಭಿಸಿದ್ದಾರೆ .

ರಾಜ್ಯದ ರೈತ ಸಂಘದವರು ಪೇಟಿಎಂ (Paytm)ಕ್ಯೂಆರ್ ಕೋಡ್‍ನಂತೆ ಪೇ ಫಾರ್ಮರ್ ಕ್ಯೂಆರ್ ಕೋಡ್ ಪೋಸ್ಟರ್ ರಿಲೀಸ್ ಮಾಡಿ, ತಾವು ಬೆಳೆದ ಬೆಳೆಗಳಿಗೆ ತಕ್ಕ ಬೆಲೆ ನೀಡುವಂತೆ ಆಗ್ರಹಿದ್ದಾರೆ.ಇದನ್ನು ಓದಿ –ಬಾಯ್‌ಫ್ರೆಂಡ್‌ಗೆ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ- ಇಬ್ಬರ ಬಂಧನ

ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ. ನೀವು ಯಾರೇ ಅಧಿಕಾರಕ್ಕೆ ಬಂದರೂ, ರೈತರ ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರಕ್ಕೆರಲು ಸರ್ಕಸ್ ಮಾಡುತ್ತಿದ್ದೀರಾ. ಇನ್ನೂ ಕೆಲವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದೀರಾ. ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ ನಡೆಸುತ್ತಿದ್ದಾರೆ.

ಮೊದಲು ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿ ಎಂದು ಕಿಡಿಕಾರಿದ್ದಾರೆ.

ರೈತರ ಒಂದು ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡುವಂತೆ ಮಂಡ್ಯದ ರೈತರು ಪೇ ಫಾರ್ಮರ್ ಕ್ಯೂಆರ್ ಕೋಡ್ ಪೋಸ್ಟರ್ ರಿಲೀಸ್ ಮಾಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಫೇಸ್‍ಬುಕ್ ಪೇಜ್‍ನಲ್ಲೂ ಪೋಸ್ಟರ್ ಹಾಕಲಾಗಿದೆ. ಫೇಸ್‍ಬುಕ್ ಖಾತೆಯಲ್ಲಿ ಈ ಪೋಸ್ಟರ್ ಅನ್ನು ಶೇರ್ ಮಾಡಿಕೊಳ್ಳುವ ಮೂಲಕ ಸರ್ಕಾರ ಹಾಗೂ ಕಾಂಗ್ರೆಸ್‍ಗೆ ತಿರುಗೇಟು ನೀಡಿದ್ದಾರೆ.

error: Content is protected !!