March 29, 2023

Newsnap Kannada

The World at your finger tips!

crime , video ,viral

BED graduate who sent nude video of hostel mates to boyfriend - two arrested

ಬಾಯ್‌ಫ್ರೆಂಡ್‌ಗೆ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ- ಇಬ್ಬರ ಬಂಧನ

Spread the love

ವಿವಾಹಿತ ವೈದ್ಯ ಬಾಯ್‌ಫ್ರೆಂಡ್‌ಗೆ ತನ್ನ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ ಸೇರಿದಂತೆ ಇಬ್ಬರನ್ನು ಮಧುರೈ ಪೋಲಿಸರು ಬಂಧಿಸಿದ್ದಾರೆ

ತಮಿಳುನಾಡಿನ ಮಧುರೈನಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್‌ಮೇಟ್ ಗಳ ಆಕ್ಷೇಪಾರ್ಹ ವೀಡಿಯೋಗಳು ಹಾಗೂ ಫೋಟೋಗಳನ್ನು ಸೆರೆ ಹಿಡಿದು ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ದಾಳೆ. ಚಾಮುಂಡಿ ತಾಯಿಯ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ

ಖಾಸಗಿ ಕಾಲೇಜಿನ ಬಿಇಡಿ (BED) ಪದವೀಧರೆ ಕಾಳೇಶ್ವರಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಆಶಿಕ್‌ನನ್ನು ಬಂಧಿಸಲಾಗಿದೆ. ಕಾಳೇಶ್ವರಿ ವಾಸವಿದ್ದ ಅಣ್ಣಾನಗರದ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.

ಕುಮುತಿ ನಗರದಲ್ಲಿ ಕ್ಲಿನಿಕ್ ನಡೆಸುತ್ತಿರುವ ಆಶಿಕ್ (31) ಮೂರು ವರ್ಷದ ಹಿಂದೆಯೇ ವಿವಾಹವಾಗಿದ್ದ. ಆದರೂ ಕಾಳೇಶ್ವರಿಯೊಂದಿಗೆ ಸ್ನೇಹ ಬೆಳೆಸಿದ್ದ, ಆಕೆಗೆ ಹಾಸ್ಟೆಲ್ ಮೇಟ್‌ಗಳು ಸ್ನಾನ ಮಾಡುವಾಗ ಮತ್ತು ಬಟ್ಟೆ ಬದಲಾಯಿಸುವಾಗ ಅವರ ವೀಡಿಯೋ ಶೂಟ್ ಮಾಡುವಂತೆ ಹೇಳಿದ್ದ. ಕಾಳೇಶ್ವರಿ ನಡೆ ಬಗ್ಗೆ ಅನುಮಾನಗೊಂಡ ವಾರ್ಡನ್ ಆಕೆಯ ಫೋನ್ ಅವನ್ನು ಪರಿಶೀಲಿಸಿದ್ದಾರೆ, ಬಳಿಕ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಸೈಬರ್ ಕ್ರೈಂ ತಂಡ ಈ ಬಗ್ಗೆ ತನಿಖೆ ಆರಂಭಿಸಿದೆ ಆಶಿಕ್ ಮತ್ತು ಕಾಳೀಶ್ವರಿಯನ್ನು ಬಂಧಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

error: Content is protected !!