ದೇವಸ್ಥಾನ 25 ಲಕ್ಷ ರು ಹಣ ದುರುಪಯೋಗ : ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತರ ಬಂಧನ

Team Newsnap
1 Min Read

ಬೆಂಗಳೂರಿನ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ 25 ಲಕ್ಷ ರುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿಧಾನ ಸಭಾ ಪೋಲೀಸರು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಶುಕ್ರವಾರ ಬಂಧಿಸಿದ್ದಾರೆ

ವೆಂಕಟರಮಣ ಗುರು ಪ್ರಸಾದ್ ಎಂಬ ಅಧಿಕಾರಿಯೇ ಬಂಧಿತರು.

ಕಳೆದ ವರ್ಷದ ಕರಗ ಉತ್ಸವ ವೇಳೆ ಗುರು ಪ್ರಸಾದ್ ನಡೆಸಿರುವ ಅಕ್ರಮ ಈ ಬಾರಿ ಆಡಿಟ್ ಪರಿಶೀಲನೆ ವೇಳೆ ಬಯಲಿಗೆ ಬಂದ ನಂತರ ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರ್ ಅರವಿಂದ್ ಬಾಬು ಪೋಲೀಸರಿಗೆ ದೂರು ನೀಡಿದ್ದರು

ಆರೋಪಿ ವೆಂಕಟರಮಣ ಬೆಂಗಳೂರು ನಗರ ವ್ಯಾಪ್ತಿಯ ದೇವಸ್ಥಾನಗಳಿಗೆ ಸೇರಿ 25 ಲಕ್ಷಕ್ಕೂ ಹೆಚ್ಚು ಹಣವನ್ನು ಡ್ರಾ ಮಾಡಿಕೊಂಡು ಸ್ವಂತ ಖಾತೆ ವರ್ಗಾವಣೆ ಮಾಡಿಕೊಂಡ ತಪ್ಪು ಲೆಕ್ಕ ನೀಡಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ

ಲೆಕ್ಕ ಪರಿಶೋಧನೆ ಪತ್ತೆಯಾದ ವಂಚನೆಯ ಬಗ್ಗೆ ವಿವರಣೆ ಕೇಳಲಾಗಿತ್ತು. ಧರ್ಮ ರಾಯನ ದೇವಸ್ಥಾನಕ್ಕೆ ಸೇರಿದ 15 . 97 ಲಕ್ಷ ರುಗಳನ್ನು ಕರಗದ ಖರ್ಚು ಎಂದು ತೋರಿಸಿದ್ದಾರೆ ಅಲ್ದೇ 10 ಗ್ರಾಂ ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದರೆ.

Share This Article
Leave a comment