ಪಾಪ್ಯುಲರ್ ಫ್ರಂಟ್ ಆಫ್ (PFI) ಇಂಡಿಯಾ ಸಂಘಟನೆ ಮುಂದಿನ ವಾರ ಭಾರತದಲ್ಲಿ ನಿಷೇಧ?

Team Newsnap
1 Min Read

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲು ಚಿಂತನೆ ನಡೆದಿದೆ.

ಕೇಂದ್ರ ಗೃಹ ಇಲಾಖೆ ಈ ಬಗ್ಗೆ ತಯಾರಿ ಆರಂಭಿಸಿದೆ. ಮುಂದಿನ ಒಂದು ವಾರದಲ್ಲಿ ಸಂಘಟನೆ ನಿಷೇಧವಾಗುವ ಸಾಧ್ಯತೆಗಳಿವೆ

ಈ ಸಂಘಟನೆ ಬಗ್ಗೆ ಹಲವು ದೂರುಗಳ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಪಿಎಫ್‌ಐ ದೇಶದಲ್ಲಿ ಶಾಂತಿ ಕದಡುವುದು, ವೈಷಮ್ಯ ಭಿತ್ತುವುದು, ಭಯೋತ್ಪಾದನೆಗೆ ಬೆಂಬಲ ಹಾಗೂ ಕೋಮು ಪ್ರಚೋದನೆ ನೀಡುವ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.
ಈ ಸಂಬಂಧ ಅಜಯ್ ಭಲ್ಲಾ ವರದಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳದಿಂದಲೂ ಮಾಹಿತಿ ಕೋರಲಾಗಿದೆ.

ಕೇರಳದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರಣೆ ಹಾಗೂ ಬೆಂಗಳೂರಿನಲ್ಲಿ ಹಲವು ಗಲಭೆಗಳ ಹಿಂದೆ ಪಿಐಎಫ್ ಪಾತ್ರ ಇರುವ ಬಗ್ಗೆ ರಾಜ್ಯ ಸರ್ಕಾರಗಳಿಂದ ಗೃಹ ಇಲಾಖೆ ಮಾಹಿತಿ ತರಿಸಿಕೊಂಡಿದೆ.

ಈ ಎಲ್ಲಾ ವರದಿಗಳನ್ನು ಆಧರಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಭಾರತದಲ್ಲಿ ಬ್ಯಾನ್ ಮಾಡಲು ತಯಾರಿ ನಡೆಯುತ್ತಿದೆ.

ಈವರೆಗೂ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೇರಣೆ ನೀಡುವ 42 ಮತ್ತು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಸುವ್ಯವಸ್ಥಿತೆ ಹದಗೆಡಿಸುವ 11 ಸಂಘಟನೆಗಳನ್ನು ಗೃಹ ಇಲಾಖೆ ನಿಷೇಧಿಸಿದೆ‌.

Share This Article
Leave a comment