ಟೀಂ ಇಂಡಿಯಾ – ಐರ್ಲೆಂಡ್ ಟಿ-20 ರೋಚಕ ಪಂದ್ಯ – ಸರಣಿ ಗೆದ್ದ ಭಾರತ

Team Newsnap
1 Min Read

ಐರ್ಲೆಂಡ್ ವಿರುದ್ಧದ ಟಿ-20 ಸರಣಿಯನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ. ಮಂಗಳವಾರ ರಾತ್ರಿ ನಡೆದ ಅಂತಿಮ ಹಾಗೂ ಕೊನೆಯ ಪಂದ್ಯವನ್ನು 4 ರನ್​ಗಳಿಂದ ಪ್ರಾಯಾಸದ ಗೆಲುವು ಕಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​​ಗೆ ಇಳಿದ ಟೀಂ ಇಂಡಿಯಾ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್​​ ಅವರ ಅಮೋಘ ಆಟದಿಂದ 225 ರನ್​​ಗಳನ್ನ ಕಲೆ ಹಾಕಿತ್ತು.

ಈ ಗುರಿಯನ್ನು ಬೆನ್ನು ಹತ್ತಿದ್ದ ಐರ್ಲೆಂಡ್ ತಂಡ ಭಾರತದ ಬೌಲರ್​ಗಳನ್ನು ಚೆನ್ನಾಗಿ ದಣಿಸಿದರು. 5 ವಿಕೆಟ್ ಕಳೆದುಕೊಂಡು ಗೆಲುವಿನ ಸನಿಹಕ್ಕೆ ಬಂದಿದ್ದ ಐರ್ಲೆಂಡ್ ತಂಡ 20 ಓವರ್​ನಲ್ಲಿ 221 ರನ್​ಗಳಿಸಿ ಸೋಲನ್ನು ಒಪ್ಪಿಕೊಂಡರು.

ಮಣ್ಣೆತ್ತಿನ ಅಮಾವಾಸ್ಯೆ

ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಮಲಿಕ್ ಹಾಗೂ ರವಿ ತಲಾ ಒಂದು ವಿಕೆಟ್ ಪಡೆದುಕೊಂಡರು.

Share This Article
Leave a comment