ರೋಹಿಣಿ ಸಿಂಧೂರಿ ಮನೇಲಿ 40 ನೌಕರರು ಕೆಲ್ಸ ಮಾಡ್ತಿದ್ದಾರೆ. ಅವರ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರೇ ಡಿಸಿ ಮನೆಗೆ ಹೋಗ್ತಾರೆ. ನಮ್ಮ ಮಕ್ಕಳು ಆನ್ ಲೈನ್ ಕ್ಲಾಸ್ ನಲ್ಲಿ ಓದಬೇಕು ನಮ್ಗೊಂದು, ಅವರಿಗೆ ಒಂದು ನ್ಯಾಯನಾ?
ಹೀಗೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಎ.ಮಂಜು ಶನಿವಾರ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಎ. ಮಂಜು, ‘ಇವತ್ತು ಡಿಸಿ ಮನೆಗೆ ಎಲ್ಲಾ ಡಿಪಾರ್ಟ್ಮೆಂಟ್ಗಳಿಂದ 10 ಜನ, 20 ಜನ.. ನನಗೆ ಗೊತ್ತಿರುವ ಮಾಹಿತಿ ಪ್ರಕಾರ 30 ರಿಂದ 40 ಜನ ಜಿಲ್ಲಾಧಿಕಾರಿಗಳ ಮನೆಯಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಮಕ್ಕಳಿಗೆಲ್ಲಾ ಆನ್ಲೈನ್ ಕ್ಲಾಸ್, ಅವರ ಮಕ್ಕಳಿಗೆಲ್ಲಾ ಮನೆಗೆ ಹೋಗಿ ಪಾಠ ಮಾಡುತ್ತಾರೆ? ಹಾಗಾದ್ರೆ ನಮ್ಮವ್ರೆಲ್ಲಾ ಮಕ್ಕಳಲ್ವಾ? ಯಾಕೆ ಈ ಇಬ್ಬಗೆಯ ತನ? ಎಂದು ಪ್ರಶ್ನೆ ಮಾಡಿದರು.
ಡಿಸಿ ಸಿಂಧೂರಿ ಹೇಳುತ್ತಾರೆ. ಆನ್ಲೈನ್ ಕ್ಲಾಸ್ ಇರಲಿ, ಅಂತರ ಇರಲಿ, ದೂರ ಇರಿ ಅಂತಾರೆ. ಡಿಸಿ ಮಕ್ಕಳಿಗೆ ಸ್ಪೆಷಲ್ಲಾ? ಇಲ್ಲಿ ಮಿಸ್ ಯೂಸ್ ಅನ್ನೋದಕ್ಕಿಂತ ಅಧಿಕಾರವನ್ನು ಹೇಗೆ ಬಳಸಿಕೊಳ್ತಾರೆ ಅನ್ನೋದು ಮುಖ್ಯ. ಅವರ ಅನುಕೂಲಕ್ಕೆ ಮಾಡಿದಾಗ ಅದು ಮಿಸ್ ಯೂಸ್ ಅಲ್ಲ, ಅದನ್ನೇ ಬೇರೆಯವರು ಮಾಡಿದ್ರೆ ಮಿಸ್ ಯೂಸ್ ಎಂದು ಕಿಡಿಕಾರಿದರು.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ