ರೋಹಿಣಿ ಮಕ್ಕಳ ಪಾಠಕ್ಕೆ ಶಿಕ್ಷಕರೇ ಮನೆಗೆ ಬರುತ್ತಾರೆ : ನಮ್ಮ ಮಕ್ಕಳಿಗೆ ಯಾಕೆ ಆನ್ ಲೈನ್ ‌ಕ್ಲಾಸ್ ? ಎ ಮಂಜು‌ ಪ್ರಶ್ನೆ ‌

Team Newsnap
1 Min Read

ರೋಹಿಣಿ ಸಿಂಧೂರಿ ಮನೇಲಿ 40 ನೌಕರರು ಕೆಲ್ಸ ಮಾಡ್ತಿದ್ದಾರೆ. ಅವರ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರೇ ಡಿಸಿ ಮನೆಗೆ ಹೋಗ್ತಾರೆ. ನಮ್ಮ ಮಕ್ಕಳು ಆನ್ ಲೈನ್ ಕ್ಲಾಸ್ ನಲ್ಲಿ ಓದಬೇಕು ನಮ್ಗೊಂದು, ಅವರಿಗೆ ಒಂದು ನ್ಯಾಯನಾ?

ಹೀಗೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಎ.ಮಂಜು ಶನಿವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಎ. ಮಂಜು, ‘ಇವತ್ತು ಡಿಸಿ ಮನೆಗೆ ಎಲ್ಲಾ ಡಿಪಾರ್ಟ್​ಮೆಂಟ್​ಗಳಿಂದ 10 ಜನ, 20 ಜನ.. ನನಗೆ ಗೊತ್ತಿರುವ ಮಾಹಿತಿ ಪ್ರಕಾರ 30 ರಿಂದ 40 ಜನ ಜಿಲ್ಲಾಧಿಕಾರಿಗಳ ಮನೆಯಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಮಕ್ಕಳಿಗೆಲ್ಲಾ ಆನ್​ಲೈನ್​ ಕ್ಲಾಸ್​, ಅವರ ಮಕ್ಕಳಿಗೆಲ್ಲಾ ಮನೆಗೆ ಹೋಗಿ ಪಾಠ ಮಾಡುತ್ತಾರೆ? ಹಾಗಾದ್ರೆ ನಮ್ಮವ್ರೆಲ್ಲಾ ಮಕ್ಕಳಲ್ವಾ? ಯಾಕೆ ಈ ಇಬ್ಬಗೆಯ ತನ? ಎಂದು ಪ್ರಶ್ನೆ ಮಾಡಿದರು.

ಡಿಸಿ ಸಿಂಧೂರಿ ಹೇಳುತ್ತಾರೆ. ಆನ್​​ಲೈನ್​ ಕ್ಲಾಸ್​ ಇರಲಿ, ಅಂತರ ಇರಲಿ, ದೂರ ಇರಿ ಅಂತಾರೆ. ಡಿಸಿ ಮಕ್ಕಳಿಗೆ ಸ್ಪೆಷಲ್ಲಾ? ಇಲ್ಲಿ ಮಿಸ್​​ ಯೂಸ್ ಅನ್ನೋದಕ್ಕಿಂತ ಅಧಿಕಾರವನ್ನು ಹೇಗೆ ಬಳಸಿಕೊಳ್ತಾರೆ ಅನ್ನೋದು ಮುಖ್ಯ. ಅವರ ಅನುಕೂಲಕ್ಕೆ ಮಾಡಿದಾಗ ಅದು ಮಿಸ್​ ಯೂಸ್ ಅಲ್ಲ, ಅದನ್ನೇ ಬೇರೆಯವರು ಮಾಡಿದ್ರೆ ಮಿಸ್​​ ಯೂಸ್ ಎಂದು ಕಿಡಿಕಾರಿದರು.

Share This Article
Leave a comment