ನಟಿ‌ ನೇಹಾ ಶೆಟ್ಟಿ ‌ತಂದೆ ಹರಿರಾಜ್ ಶೆಟ್ಟಿ ಬಂಧಿಸಿದ ಸಿಸಿಬಿ ಪೋಲಿಸರು

Team Newsnap
1 Min Read

‘ಮುಂಗಾರು ಮಳೆ 2’ ಚಿತ್ರದಲ್ಲಿ ನಾಯಕಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಜೂಜು ಅಡ್ಡೆ ನಡೆಸುತ್ತಿದ್ದ ಕಾರಣಕ್ಕೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಗೂಂಡಾ ಕಾಯ್ದೆಯಡಿ ಹರಿರಾಜ್ ಶೆಟ್ಟಿಯನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ, ಪೊಲೀಸರು ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕೋರ್ಟ್​ನಲ್ಲಿ ದೂರಿದ್ದರು. ನಂತರ ಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆದು ಜೈಲಿನಿಂದ ಹೊರ ಬಂದಿದ್ದರು.

ಈಗ ಗೂಂಡಾ ಕಾಯ್ದೆ ತಡೆ ತೆರವಿಗೆ ಸಿಸಿಬಿ ಮನವಿ ಮಾಡಿತ್ತು.ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ ಬಳಿಕ ಮತ್ತೆ ಆರೋಪಿ ಹರಿರಾಜ್​ ಬಂಧಿಸಿ ಜೈಲಿಗೆ ಕರೆದೊಯ್ಯಲಾಗಿದೆ.

ರಿಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಅವರು ಜೂಜು ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಹರಿರಾಜ್​ ಮೇಲೆ 19 ಕೇಸ್​ಗಳು ದಾಖಲಾಗಿವೆ.

ಕೋರಮಂಗಲ, ಕಬ್ಬನ್ ಪಾರ್ಕ್, ಅಶೋಕ ನಗರ, ಬಸವೇಶ್ವರ ನಗರ, ಸೇರಿ ಹಲವು ಪೊಲೀಸ್ ಠಾಣೆಗೆ ಇವರು ಬೇಕಾಗಿದ್ದಾರೆ.‌

Share This Article
Leave a comment