ಭಾರತದಲ್ಲಿ ಪ್ರತಿಭಾವಂತರು ಸಾಕಷ್ಟು ಇದ್ದಾರೆ: ಶ್ಲಾಘಿಸಿದ ಪುಟಿನ್

Team Newsnap
1 Min Read

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಮತ್ತು ಭಾರತದಲ್ಲಿ ವಾಸಿಸುವ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಾರತೀಯರ ಪ್ರತಿಭೆ ಮತ್ತು ಅರ್ಹತೆಯನ್ನು ಒಪ್ಪಿಕೊಂಡಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ಭಾರತೀಯರನ್ನು ‘ಪ್ರತಿಭಾವಂತರು’ ಮತ್ತು ‘ಪ್ರೇರೇಪಿತ’ ಎಂದು ಶ್ಲಾಘಿಸಿದ್ದಾರೆ ಮತ್ತು ಭಾರತವು ಬೆಳೆಯಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.ಮತ್ತೆ ED ನೋಟಿಸ್:‌ ಒಂದೇ ವಿಚಾರಕ್ಕೆ ಎರಡು ಪ್ರಕರಣ: ಡಿ.ಕೆ ಶಿವಕುಮಾರ್‌

ಭಾರತವು ಅಭಿವೃದ್ಧಿಯ ಪಥದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ. ಈ ಮೂಲಕ ಒಂದು ವಾರದಲ್ಲಿ ಎರಡನೇ ಬಾರಿಗೆ ಪುಟಿನ್ ಭಾರತವನ್ನು ನೆನಪಿಸಿಕೊಂಡಿದ್ದಾರೆ. ಕಳೆದ ವಾರದ ಆರಂಭದಲ್ಲಿ, ರಷ್ಯಾ ಅಧ್ಯಕ್ಷರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಹೊಗಳಿದ್ದರು.

ನವೆಂಬರ್ 4 ರಂದು ರಷ್ಯಾದ ಏಕತಾ ದಿನದಂದು ಮಾತನಾಡಿದ ರಷ್ಯಾ ಅಧ್ಯಕ್ಷರು, ಭಾರತದಲ್ಲಿ ಅಭಿವೃದ್ಧಿಯ ಸಾಕಷ್ಟು ಸಾಮರ್ಥ್ಯಗಳಿವೆ ಎಂದು ಶ್ಲಾಘಿಸಿದರು.

ಭಾರತವು ಅದರ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ, ಅದರ ಬಗ್ಗೆ ಯಾವುದೇ ಸಂದೇಹವಿಲ್ಲ’ ಎಂದು ಪುಟಿನ್ ಹೇಳಿದ್ದಾರೆ. ಅದೇ ಸಮಯದಲ್ಲಿ, ಭಾರತದ 1.5 ಬಿಲಿಯನ್ ಜನರು ಈ ಅಗಾಧ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

Share This Article
Leave a comment