May 29, 2022

Newsnap Kannada

The World at your finger tips!

talakaveri

ಅಕ್ಟೋಬರ್. 17 ರಂದು ತಲಕಾವೇರಿ ಯಲ್ಲಿ ತೀರ್ಥೋದ್ಭವ

Spread the love

ತಲಕಾವೇರಿಯಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಮೊದಲು ಸೆ.26 ರಂದು ಬೆಳಿಗ್ಗೆ 8.31ಕ್ಕೆ ತುಲಾಲಗ್ನದಲ್ಲಿ ತೀರ್ಥೋದ್ಭವ ನಡೆಯಲಿದೆ. ಅಕ್ಟೋಬರ್ 4ರಂದು ಬೆಳಿಗ್ಗೆ ವೃಶ್ಚಿಕ ಲಗ್ನದ ಆಜ್ಞಾ ಮುಹೂರ್ತದಲ್ಲಿ, ಅಕ್ಟೋಬರ್ 14 ಬೆಳಿಗ್ಗೆ 11.45 ಧನುರ್ ಲಗ್ನ ದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಸಂಜೆ 5.15ಕ್ಕೆ ಮೀನ ಲಗ್ನ ದಲ್ಲಿ ಕಾಣಿಕೆ ಇರಿಸುವುದು ಎಂದು‌ ಕಾರ್ಯಕ್ರಮದ ಪಟ್ಟಿ ಮಾಡಲಾಗಿದೆ. ಈ ಎಲ್ಲ ಕಾರ್ಯಕ್ರಮದ ನಂತರ ಅಕ್ಟೋಬರ್ 17ರಂದು ಬೆಳಿಗ್ಗೆ 7.03ಕ್ಕೆ ಕನ್ಯಾ ಲಗ್ನದಲ್ಲಿ ಮೂಲ ಕಾವೇರಿ ತೀರ್ಥೋದ್ಬವದ ಪುಣ್ಯ ಕಾರ್ಯ ನಡೆಯಲಿದೆ ಎಂದು ತಲಕಾವೇರಿ ಭಾಗಮಂಡಲ ದೇವಾಲಯ ಕಾರ್ಯ ನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ.


error: Content is protected !!