ತಮ್ನಾರ್ ವಿದ್ಯುತ್ ಯೋಜನೆಗೆ ಕರ್ನಾಟಕ-ಗೋವಾ ಪರಿಸರ ಪ್ರೇಮಿಗಳ. ಭಾರಿ ವಿರೋಧ

Team Newsnap
1 Min Read

ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮೂಲಕ ಗೋವಾಕ್ಕೆ ಹಾದು ಹೋಗುವ ತಮ್ನಾರ್ ವಿದ್ಯುತ್ ಮಾರ್ಗಕ್ಕೆ ಉಭಯ ರಾಜ್ಯಗಳ ಪರಿಸರ ಪ್ರೇಮಿಗಳು ಹಾಗೂ ನಾಗರೀಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಛತ್ತೀಸ್ ಘಡದ ತಮ್ನಾರ್ ಶಕ್ತಿ ಸ್ಥಾವರದ ಮೂಲಕ ಧಾರವಾಡದ ನರೇಂದ್ರ ಗ್ರಾಮದ ಮಾರ್ಗವಾಗಿ ೪೦೦ ಕಿಲೋ ವ್ಯಾಟ್ ಸಾಮರ್ಥ್ಯದ ಲೈನ್ ಗೋವಾಗೆ ಹೋಗುವ ದಾರಿಯಲ್ಲಿ ಇರುವ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಅರಣ್ಯ, ಬೆಳಗಾವಿಯ ತವಭೀಮನಗಡ ಸಂರಕ್ಷಿತ ಅರಣ್ಯ ಹಾಗೂ ಧಾರವಾಡದ ಚಿಕ್ಕ ಪುಟ್ಟ ಅರಣ್ಯ ಪ್ರದೇಶಗಳ ಒಟ್ಟು ೧೭೦ ಹೆಕ್ಟೇರ್ ಪ್ರದೇಶ ನಾಶವಾಗಲಿದೆ. ಇದರಿಂದ ಪದರಕೃತಿಯ ಅಸಮತೋಲನ ಉಂಟಾಗುವುದರಿಂದ ಈ ಯೋಜನೆಗೆ ಪರಿಸರ ಪ್ರೇಮಿಗಳು ಹಾಗೂ ನಾಗರೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿನ ಮೋಲೆಮ್ ಗ್ರಾಮದ ನಿವಾಸಿಗಳೂ ಸಹ ಸ್ವತಃ ಅವರ ಸರ್ಕಾರ ಅನುಮೋದಿಸಿರುವ ಈ ಯೋಜನೆಯನ್ನು ವಿರೋಧಿಸಿದ್ದಾರೆ. ತಮ್ನಾರ್ ವಿದ್ಯುತ್ ಮಾರ್ಗವು ಭಗವಾನ್ ಮಹಾವೀರ ಅಭಯಾರಣ್ಯ ಮತ್ತು ಮೋಲೆಮ್ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿದ ಹಲವು ಪ್ರದೇಶಗಳಷ್ಟು ಅರಣ್ಯ ನಾಶ ಮಾಡುವದರಿಂದ ಟ್ರಾವೆಲ್ ಅಂಡ್ ಟೂರಿಸಂ ಅಸೋಸಿಯೇಷನ್ ಆಫ್ ಗೋವಾ ಈ ಯೋಜನೆಯನ್ನು ವಿರೋದಿಸಿತ್ತು. ಈಗ ಮೋಲೆಮ್ ನ ಸಾರ್ವಜನಿಕರು, ಯೋಜನೆಯ ಸಾಧಕ-ಬಾಧಕಗಳ ಕುರಿತು ಏರ್ಪಡಿಸಿದ್ದ ಸಭೆಯೊಂದಕ್ಕೆ ಆಗಮಿಸಿದ್ದ ಪಿಡಬ್ಲ್ಯುಡಿ ಸಚಿವ ದೀಪಕ್ ಪಾವಸ್ಕಾರ್ ಹಾಗೂ ವಿದ್ಯುತ್ ಖಾತೆ ಸಚಿವ ನೀಲೇಶ ಕಬ್ರಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರು ಅಲ್ಲಿನ ೧೦೦ ಜನ ಯುವಕರಿಗೆ ಉದ್ಯೋಗ ನೀಡುವುದಾಗಿ ಮನವೊಲಿಸಲು ಪ್ರಯತ್ನಿಸಿದರು. ಹಾಗೆಯೇ ಯೋಜನೆಗೆ ಸಂಬಂಧಪಟ್ಟಂತೆ ಅದರ ಉಪಯೋಗಗಳನ್ನೂ ವಿವರಿಸಲು ಪ್ರಯತ್ನಿಸಿದ್ದಾರೆ‌. ಸಚಿವರ ಸಮರ್ಥನೆಗಳಿಂದ ತೃಪ್ತರಾಗದ ಸಾರ್ವಜನಿಕರು ಸಚಿವರಿಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಂದರ್ಭ ವಿಷಮಕ್ಕೆ ತಿರುಗುತ್ತಿರುವುದನ್ನು ಮನಗಂಡ ಪೋಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ‌.

ಕರ್ನಾಟಕವೂ ಸಹ ಈ ಯೋಜನೆಗೆ ಅನುಮತಿ ನೀಡದೇ ಪರಿಸರ ರಕ್ಷಣೆಗೆ ಮುಂದಾಗಬೇಕಾಗಿದೆ.

Share This Article
Leave a comment