ಟಿ20 ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟ: ಪಾಕಿಸ್ತಾನದ ಜೊತೆ ಇಂಡಿಯಾದ ಮೊದಲ ಪಂದ್ಯ

Team Newsnap
1 Min Read

ಆಸ್ಟ್ರೇಲಿಯಾ ಆತಿಥ್ಯದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ 2022ರ ಐಸಿಸಿ ಟಿ20 ವಿಶ್ವಕಪ್‌ ಪಂದ್ಯದ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಪ್ರಕಟಿಸಿದೆ.

8ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್‌ 16 ರಿಂದ ನವೆಂಬರ್‌ 13ಕ್ಕೆ ಅಂತ್ಯವಾಗಲಿದೆ.

ಅಡಿಲೇಡ್‌, ಬ್ರಿಸ್ಬೇನ್‌, ಗೀಲಾಂಗ್‌, ಹೊಬರ್ಟ್‌, ಮೆಲ್ಬೋರ್ನ್‌, ಪರ್ತ್‌ ಹಾಗೂ ಸಿಡ್ನಿ ಸೇರಿ ಏಳು ಮೈದಾನಗಳಲ್ಲಿ ಒಟ್ಟು 45 ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

​ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್‌ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಹಾಗೂ ಇಂಗ್ಲೆಂಡ್‌, ತಂಡಗಳು ಈಗಾಗಲೇ ಸೂಪರ್‌ 12ಕ್ಕೆ ನೇರ ಪ್ರವೇಶ ಪಡೆದಿವೆ.

ವೆಸ್ಟ್ ಇಂಡೀಸ್‌, ನಮೀಬಿಯಾ, ಶ್ರೀಲಂಕಾ ಹಾಗೂ ಸ್ಕಾಟ್ಲೆಂಡ್‌, ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಹೋರಾಟ ನಡೆಸಲಿವೆ.

ಈ ಮಿನಿಯುದ್ಧದಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಆಡಲಿದೆ.

ಅಕ್ಟೋಬರ್​ 23ರಂದು ಭಾರತ-ಪಾಕ್​ ನಡುವೆ ಬಿಗ್​ ಫೈಟ್ ನಡೆಯಲಿದ್ದು ಸಾಕಷ್ಟು ರೋಚಕತೆಯಿಂದ ಕೂಡಿದೆ. ನವೆಂಬರ್​ 9ರಂದು ಮೊದಲ ಸೆಮಿಫೈನಲ್​ ಪಂದ್ಯ. ನವೆಂಬರ್​ 10ರಂದು ಎರಡನೇ ಸೆಮಿಫೈನಲ್​ ಪಂದ್ಯ. ಕೊನೆಯದಾಗಿ ಫೈನಲ್​ ಪಂದ್ಯವನ್ನು ನವೆಂಬರ್​ 13ರಂದು ನಡೆಸುವುದಾಗಿ ಮಂಡಳಿ ತಿಳಿಸಿದೆ.

Share This Article
Leave a comment