ಆಸ್ಟ್ರೇಲಿಯಾ ಆತಿಥ್ಯದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ 2022ರ ಐಸಿಸಿ ಟಿ20 ವಿಶ್ವಕಪ್ ಪಂದ್ಯದ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.
8ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16 ರಿಂದ ನವೆಂಬರ್ 13ಕ್ಕೆ ಅಂತ್ಯವಾಗಲಿದೆ.
ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬರ್ಟ್, ಮೆಲ್ಬೋರ್ನ್, ಪರ್ತ್ ಹಾಗೂ ಸಿಡ್ನಿ ಸೇರಿ ಏಳು ಮೈದಾನಗಳಲ್ಲಿ ಒಟ್ಟು 45 ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಹಾಗೂ ಇಂಗ್ಲೆಂಡ್, ತಂಡಗಳು ಈಗಾಗಲೇ ಸೂಪರ್ 12ಕ್ಕೆ ನೇರ ಪ್ರವೇಶ ಪಡೆದಿವೆ.
ವೆಸ್ಟ್ ಇಂಡೀಸ್, ನಮೀಬಿಯಾ, ಶ್ರೀಲಂಕಾ ಹಾಗೂ ಸ್ಕಾಟ್ಲೆಂಡ್, ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಹೋರಾಟ ನಡೆಸಲಿವೆ.
ಈ ಮಿನಿಯುದ್ಧದಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಆಡಲಿದೆ.
ಅಕ್ಟೋಬರ್ 23ರಂದು ಭಾರತ-ಪಾಕ್ ನಡುವೆ ಬಿಗ್ ಫೈಟ್ ನಡೆಯಲಿದ್ದು ಸಾಕಷ್ಟು ರೋಚಕತೆಯಿಂದ ಕೂಡಿದೆ. ನವೆಂಬರ್ 9ರಂದು ಮೊದಲ ಸೆಮಿಫೈನಲ್ ಪಂದ್ಯ. ನವೆಂಬರ್ 10ರಂದು ಎರಡನೇ ಸೆಮಿಫೈನಲ್ ಪಂದ್ಯ. ಕೊನೆಯದಾಗಿ ಫೈನಲ್ ಪಂದ್ಯವನ್ನು ನವೆಂಬರ್ 13ರಂದು ನಡೆಸುವುದಾಗಿ ಮಂಡಳಿ ತಿಳಿಸಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ
259 ರನ್ ಗಳಿಗೆ ನ್ಯೂಜಿಲೆಂಡ್ ಆಲ್ ಔಟ್ : ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ
ಬಾಂಗ್ಲಾ ವಿರುದ್ಧ 2-0 ಸರಣಿ ಗೆಲುವು: ವಿಶ್ವಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವೇ ನಂಬರ್ ಒನ್