ಮೋಜಿಗಾಗಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡ್ತಿರಾ – ಜನರಿಗೆ ಅನುಕೂಲ ಮಾಡೋಲ್ಲಾ – ಸಿಂಧೂರಿ ವಿರುದ್ದ ಗುಡುಗು

Team Newsnap
1 Min Read

ಮೈಸೂರು ಜಿಲ್ಲೆಗೆ ಕೋವಿಡ್ ನಿರ್ವಹಣೆಗೆ 41 ಕೋಟಿ ರು ಹಣ ಬಂದಿದೆ. ಅದರಲ್ಲಿ 39 ಕೋಟಿ ರು ಖರ್ಚಾಗಿದೆ ಅಂತ ಹೇಳಿದ್ದಿರಿ. 39 ಕೋಟಿ ರು ಯಾರಿಗೆ ಕೊಟ್ಟಿದ್ದೀರಿ, ಯಾವುದಕ್ಕೆ ಖರ್ಚು ಮಾಡಿದ್ದೀರಿ ಎಂಬುದಕ್ಕೆ ಜಿಲ್ಲಾಧಿಕಾರಿ ಹಾಗೂ ಡಿಎಚ್ಓ ಮೊದಲು ಲೆಕ್ಕ ಕೊಡಲಿ ಎಂದು ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪಸಿಂಹ, ಡಿ.ಸಿ‌ ರೋಹಿಣಿ ಸಿಂಧೂರಿ ವಿರುದ್ದ ಗುಡುಗಿ, ಜನ ಕೊರೊನಾ ಸಂಕಷ್ಟದಲ್ಲಿರುವಾಗ ಈಜುಕೊಳ ಬೇಕಿತ್ತಾ ನಿಮಗೆ? ಔಷಧಿ ಖರೀದಿಗೆ ಕಾನೂನು ಅಡ್ಡ ಬರುತ್ತೆ. 28 ಲಕ್ಷ ಖರ್ಚು ಮಾಡಿ ಸ್ಮಿಮ್ಮಿಂಗ್ ಪೂಲ್ ನಿರ್ಮಿಸೋಕೆ ಕಾನೂನು ಅಡ್ಡ ಬರಲಿಲ್ವಾ ಎಂದು ಪ್ರಶ್ನಿಸಿದ್ದಾರೆ.

ಜನರನ್ನು ರಕ್ಷಿಸೋದು ಬಿಟ್ಟು ಮೋಜು ಮಸ್ತಿಗೆ ಉತ್ತೇಜನ ಕೊಡುವ ಇಂತಹ ಅಧಿಕಾರಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದರು.

ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ‌ ಪ್ರಧಾನಿಯವರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಆದರೆ ಈಗಲೂ ಕೂಡ ಇಲ್ಲದ ಸಬೂಬು ಹೇಳಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಕೇಳಿದ್ರೆ ತಪ್ಪಾ? ಪಿಎಂ ಕೇರ್ಸ್​​ನಿಂದ ಬಂದ 40 ವೆಂಟಿಲೇಟರ್​​​ಗಳನ್ನ ಇನ್ನೂ ಅಳವಡಿಕೆ ಮಾಡಿಲ್ಲ. ಇದು ಜಿಲ್ಲಾಧಿಕಾರಿಗಳ ವೈಫಲ್ಯತೆ ತೋರಿಸುತ್ತೆ. ಇದನ್ನ ಕೇಳಿದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯೆ ಅಸಹಕಾರ ಹೇಗಾಗುತ್ತೆ? ಎಂದು ಪ್ರಶ್ನಿಸಿದ್ರು.

Share This Article
Leave a comment