ನಿಯಮ ಉಲ್ಲಂಘಿಸಿ ಈಜುಕೊಳ ನಿರ್ಮಾಣ: ರೋಹಿಣಿ ಸಿಂಧೂರಿ ವಿರುದ್ದ ಸರ್ಕಾರಕ್ಕೆ ತನಿಖಾ ವರದಿ

Team Newsnap
1 Min Read
Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಗಳ ಅಧಿಕೃತ ಸರ್ಕಾರಿ ನಿವಾಸದಲ್ಲಿ ನಿರ್ಮಿಸಿದ್ದ ಈಜುಕೊಳ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಶಾಸಕ ಸಾರಾ ಮಹೇಶ್ ಸರ್ಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ವಿಚಾರಣೆಗೆ ನಿರ್ದೇಶಿಸಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ವರದಿಯ ವಿವರಗಳು ಹೀಗಿವೆ :

  • ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜು ಕೊಳ ನಿರ್ಮಾಣಕ್ಕೆ ಸಂಬಂಧ ಪಟ್ಟಂತೆ 32 ಲಕ್ಷ ರುಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಲಾಗಿದೆ. ಅಂದಾಜುಪಟ್ಟಿಗೆ ತಾಂತ್ರಿಕ ವರ್ಗದವರಿಂದ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ.
  • ಈಜುಕೊಳದ ನಿರ್ಮಾಣದ ಬಗ್ಗೆ ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಇಲ್ಲ.
  • ಈಜುಕೊಳದ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಾದೇಶ ಇಲ್ಲ
  • ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳು ಇಲ್ಲ.
  • ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ.

ಇತರ ಮಾಹಿತಿಗಳು :

  • ಈಜುಕೊಳ ನಿರ್ಮಾಣ ಮಾಡುವ ಮುಂಚೆ ಯಾವುದೇ ಸಭೆಯಲ್ಲಿ ಮಂಡಿಸಿ ಪೂರ್ವ ಅನುಮೋದನೆ ಪಡೆದಿರುವುದಿಲ್ಲ.
  • ನಿರ್ಮಿತಿ ಕೇಂದ್ರ, ಮೈಸೂರು ಇವರು ಈಜುಕೊಳ ನಿರ್ಮಾಣ ಮಾಡಲು ರೂ.32,55,131-49 ಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿರುತ್ತಾರೆ.
  • ನಿರ್ಮಿತಿ ಕೇಂದ್ರದಿಂದ ಸಲ್ಲಿಸಿರುವ ಬಿಲ್‍ನಂತೆ ಈಜುಕೊಳ ನಿರ್ಮಾಣದ ನಂತರ ಅಂತಿಮವಾಗಿ 28 ಲಕ್ಷ ರೂ. ವೆಚ್ಚವಾಗಿದೆ.
  • ಈಜುಕೊಳ ನಿರ್ಮಾಣದ ಕಾಮಗಾರಿ ದಿನಾಂಕ 2020ರ ಡಿಸೆಂಬರ್ 31ರಂದು ಪ್ರಾರಂಭಿಸಿ 2021ರ ಫೆಬ್ರವರಿ 26 ಮುಕ್ತಾಯಗೊಳಿಸಲಾಗಿದೆ.
Share This Article
Leave a comment