ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಎಫ್‌ಆರ್‌ಪಿ ಹೆಚ್ಚಳಕ್ಕೆ ಅನುಮೋದನೆ

Team Newsnap
1 Min Read

ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಕಬ್ಬಿಗೆ ೨೯೦ರೂ. ಬೆಲೆ ಹೆಚ್ಚಿಸಿದೆ. ಕಬ್ಬು ಬೆಳೆಗಾರರಿಗೆ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಪಿ) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.


ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ, ಜವಳಿ ಸಚಿವ ಪಿಯೂಷ್ ಗೋಯಲ್ ಈ ವಿಷಯ ತಿಳಿಸಿದರು. ಇದು ಕಬ್ಬು ಬೆಳೆಗಾರರಿಗೆ ಅನುಮೋದಿಸಿದ ಎಫ್‌ಆರ್‌ಪಿಯ ಅತ್ಯಧಿಕವಾಗಿದೆ. ಈ ಬೆಲೆ ಹೆಚ್ಚಳದಿಂದ ೫ ಕೋಟಿ ಕಬ್ಬು ಬೆಳೆಗಾರರಿಗೆ ಮತ್ತು ಅವರ ಅವಲಂಬಿತರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.


ಎಫ್‌ಆರ್‌ಪಿಯ ಹೆಚ್ಚಳದಿಂದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ೫ ಲಕ್ಷ ಕಾರ್ಮಿಕರಿಗೆ ಹಾಗೂ ಸಂಬಂಧ ಪೂರಕ ಚಟುವಟಿಕೆಗಳಿಗೆ ಸಹಾಯವಾಗುತ್ತದೆ ಎಂದು ಗೋಯಲ್ ವಿವರಿಸಿದರು.


ಮುಂದಿನ ಮಾರುಕಟ್ಟೆ ವರ್ಷಕ್ಕೆ ಈ ಹೊಸ ದರ ಅನ್ವಯವಾಗಲಿದೆ. ಬರುವ ಅಕ್ಟೋಬರ್‌ನಿಂದ ಕಬ್ಬು ರೈತನ ಮಾರುಕಟ್ಟೆ ವರ್ಷ ಪ್ರಾರಂಭವಾಗಲಿದೆ. ಹೊಸ ಬೆಲೆಯು ಶೇ. ೧೦ರಷ್ಟು ಚೇತರಿಕೆಯನ್ನು ಆಧರಿಸಿರುತ್ತದೆ. ಒಬ್ಬ ಬೆಳೆಗಾರ ಶೇ. ೯.೫ಕ್ಕಿಂತ ಕಡಿಮೆ ಚೇತರಿಕೆ ಹೊಂದಿದ್ದರೂ ಪ್ರತಿ ಕ್ವಿಂಟಲ್‌ಗೆ ೨೭೫ ರೂ. ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ ಆಗಿರುತ್ತದೆ ಎಂದರು.


ಸಕ್ಕರೆ ಉತ್ಪಾದನೆಯಲ್ಲಿ ಚೇತರಿಕೆ ಕಂಡಿದ್ದು, ಕಳೆದ ವರ್ಷ ರಪ್ತು ಪ್ರಮಾಣ ದಾಖಲೆಯಮಟ್ಟದ್ದಾಗಿತ್ತು. ಸುಮಾರು ೭೦ ಲಕ್ಷ ಟನ್ ರಫ್ತು ಒಪ್ಪಂದವಾಗಿದೆ ಎಂದು ಸಚಿವರು ಹೇಳಿದರು.

Share This Article
Leave a comment