September 21, 2021

Newsnap Kannada

The World at your finger tips!

ಕಾಯ್ದಿರಿಸದ ನಾಲ್ಕು ವಿಶೇಷ ರೈಲು ಸಂಚಾರ ಆರಂಭಕ್ಕೆ ನಿರ್ಧಾರ

Spread the love

ನೈರುತ್ಯ ರೈಲ್ವೆ ವಲಯವು ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದರಲ್ಲಿ ಎರಡು ಎಕ್ಸ್ಪ್ರೆಸ್, ಇನ್ನೆರಡು ಪ್ಯಾಸೆಂಜರ್ ವಿಶೇಷ ರೈಲುಗಳು ಎಂದು ಮುಖ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ರೈಲು ಸಂಖ್ಯೆ ೦೭೩೧೩/೦೭೩೧೪ ಮೈಸೂರು-ಎಜ್ವಾನೂರ್- ಮೈಸೂರು ಪ್ರತಿದಿನ ಕಾಯ್ದಿರಿಸದ ಎಕ್ಸ್ಪ್ರೆಸ್ ವಿಶೇಷ ರೈಲು, ರೈಲು ಸಂಖ್ಯೆ ೦೭೩೧೫/೦೭೩೧೬ ಎಜ್ವಾನೂರ್-ಸೇಲಂ-ಎಜ್ವಾನೂರ್ ಪ್ರತಿದಿನ ಕಾಯ್ದಿರಿಸದ ಎಕ್ಸ್ಪ್ರೆಸ್ ವಿಶೇಷ ರೈಲು.


ರೈಲು ಸಂಖ್ಯೆ ೦೭೩೨೭/೦೭೩೨೮ ಮೈಸೂರು-ಚಾಮರಾಜನಗರ- ಮೈಸೂರು-ದೈನಂದಿನ ಕಾಯ್ದಿರಿಸದ ರೈಲು ಹಾಗೂ ಸಂಖ್ಯೆ ೦೭೩೪೫/೦೭೩೪೬ ಚಾಮರಾಜನಗರ-ಕೆಎಸ್‌ಆರ್ ಬೆಂಗಳೂರು-ಚಾಮರಾಜನಗರ ದೈನಂದಿನ ಕಾಯ್ದಿರಿಸದ ಪ್ರಯಾಣಿಕರ ವಿಶೇಷ ರೈಲು.

error: Content is protected !!