March 31, 2023

Newsnap Kannada

The World at your finger tips!

shivamigg yasin

ಶಿವಮೊಗ್ಗದಲ್ಲಿ ISIS ಶಂಕಿತ ಉಗ್ರ ಯಾಸೀನ್ ಬೈಲು ಬಂಧನ – ಮತ್ತಿಬ್ಬರ ಬಂಧನಕ್ಕೆ ಬಲೆ

Spread the love

ಶಿವಮೊಗ್ಗ ಜಿಲ್ಲೆಯಲ್ಲಿ ಐಸಿಸ್‌ ಗ್ಯಾಂಗ್‌ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಭಯೋತ್ಪಾದಕರ ಬಾಂಬ್
ಸ್ಫೋಟಿಸುವ ಗ್ಯಾಂಗ್‌ ಇದು ಎಂದು ಪೊಲೀಸರು ಶಂಕಿಸಿದ್ದಾರೆ.

ಐಸಿಸ್‌ ಜೊತೆ ನಂಟು ಹೊಂದಿದ್ದ ಆರೋಪದಡಿ ಈಗಾಗಲೇ ಯಾಸಿನ್‌ ಎಂಬಾತನನ್ನು ಬಂಧಿಸಲಾಗಿದೆ. ಶಿವಮೊಗ್ಗದ ನಿವಾಸಿಯಾಗಿರುವ ಯಾಸಿನ್‌ ಎಲೆಕ್ಟ್ರಾನಿಕ್‌ ಇಂಜಿನಿಯರ್‌ ಆಗಿದ್ದಾನೆ. ಅಲ್ಲದೇ ಬಾಂಬ್‌ ತಯಾರಿಕೆಗೆ ತರಬೇತಿ ಕೊಡುತ್ತಿದ್ದ.

ಶಿವಮೊಗ್ಗ ಗ್ರಾಮಾಂತರ ಪೊಲೀಸರು ತೀರ್ಥಹಳ್ಳಿಯ ಶಾರಿಖ್‌, ಮಂಗಳೂರಿನ ಮಾಜ್‌ ಮತ್ತು ಶಿವಮೊಗ್ಗದ ಸೈಯದ್‌ ಯಾಸಿನ್‌ ಬೈಲು ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಐಸಿಸ್‌ ಉಗ್ರರ ಜೊತೆ ನೇರ ಸಂಪರ್ಕ ಹೊಂದಿರುವ ಯಾಸಿನ್‌ ಕುರಿತು ಯುಎಪಿಎ ಕೇಸ್‌ ದಾಖಲಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈಗ ಪ್ರವೆನ್ಷನ್ ಆಫ್ ಇನ್ಸಲ್ಟ್ ಟು ನ್ಯಾಷನಲ್ ಹಾನರ್ ಆ್ಯಕ್ಟ್ – ಕಲಂ 2 ರಡಿ ಶಂಕಿತ ಉಗ್ರರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಸಂಸದೆ ಆಣೆ – ಪ್ರಮಾಣದ ಸವಾಲು ಸ್ವೀಕರಿಸಿದ ಶಾಸಕ ಪುಟ್ಟರಾಜು: ದಿನಾಂಕ, ಸಮಯ ನಿಗದಿ ಮಾಡಿ – ಪ್ರತಿ ಸವಾಲು 

ಐಸಿಸ್ ಉಗ್ರರ ಜೊತೆ ಶಿವಮೊಗ್ಗ, ಮಂಗಳೂರು ಲಿಂಕ್ ಹೊಂದಿದೆ. ಇಲ್ಲಿ ಬಾಂಬ್‌ ಬ್ಲಾಸ್ಟ್‌ ಸೇರಿದಂತೆ ಉಗ್ರ ಚಟುವಟಿಕೆಗೆ ತರಬೇತಿ ನೀಡಲಾಗುತ್ತಿದೆ.

error: Content is protected !!