ಸಂಸದೆ ಆಣೆ – ಪ್ರಮಾಣದ ಸವಾಲು ಸ್ವೀಕರಿಸಿದ ಶಾಸಕ ಪುಟ್ಟರಾಜು: ದಿನಾಂಕ, ಸಮಯ ನಿಗದಿ ಮಾಡಿ – ಪ್ರತಿ ಸವಾಲು

Team Newsnap
1 Min Read

ಭ್ರಷ್ಟಾಚಾರ ಕುರಿತು ಸಂಸದೆ ಸುಮಲತಾ ಹಾಕಿದ್ದ ಸವಾಲು ಸ್ವೀಕರಿಸಿರುವ ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಸಂಸದರೆ ನಿಗದಿ ಮಾಡಿರುವ ಸ್ಥಳದಲ್ಲೇ ದಿನಾಂಕ , ಸಮಯ ನಿರ್ಧಾರ ಮಾಡಿದರೆ ಅಲ್ಲಿಗೆ ಬರಲು ನಾನು ಸಿದ್ದವಾಗಿದ್ದೇನೆ ಎಂದು ಹೇಳಿದರು.

ಮೇಲುಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಸಿ ಎಸ್ ಪುಟ್ಟರಾಜು, ಸಂಸದೆ ತುಂಬಾ ಹಗುರವಾಗಿ ಮಾತನಾಡುತ್ತಾರೆ. ಹೆಚ್ಚು ಮಾತನಾಡಿದರೆ ಬೇಗ ಜನರಿಗೆ ಹತ್ತಿರವಾಗುತ್ತಾರೆಂದು ಅವರು ಅಂದು ಕೊಂಡಿದ್ದಾರೆ. ಅಂಬರೀಷ್ ರ ಹೆಂಡತಿ , ಅಂಬರೀಷ್ ವ್ಯಕ್ತಿತ್ವ ಹಾಗೂ ಗುಣಗಳನ್ನು ಮೆಚ್ಚಿಕೊಂಡು ಜಿಲ್ಲೆಯ ಜನರು ಇವರನ್ನು ಆಯ್ಕೆ ಮಾಡಿದ್ದಾರೆ. ಇವರು ಆಯ್ಕೆಯಾಗಿ ನಾಲ್ಕು ವರ್ಷ ಆಗ್ತಾ ಇದೆ. ಇವರ ಸಾಧನೆ ಏನು ? ಅಭಿವೃದ್ದಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪುಟ್ಟರಾಜು ಪ್ರಶ್ನೆ ಮಾಡಿದರು.

ನೋಡ್ರಿ ,ನಾನು, ನನ್ನ ಪತ್ನಿ, ನಮ್ಮ ಅಣ್ಣನ ಮಗ ಎಲ್ಲರೂ ಜಿಪಂ ಸದಸ್ಯರಾಗಿದ್ದೆವು. ಆ ಕಾಲದಿಂದಲೂ ಮೇಲುಕೋಟೆ ಕ್ಷೇತ್ರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಕ್ಷೇತ್ರ ಜನರಿಗೆ ನಮ್ಮ ಬಗ್ಗೆ ಗೊತ್ತಿದೆ. ಇವರು ನೀಡುವ ಸರ್ಟಿಫಿಕೇಟ್ ಏನೂ ಬೇಡ ಎಂದರು. ಹೆಣ್ಣು ಮಕ್ಕಳನ್ನು ಕಂಡ್ರೆ ಗೌರವ ಇದೆ ಅದನ್ನೇ ಬಂಡವಾಳ ಮಾಡ್ಕೋಬೇಡಿ: ಸಂಸದೆ ಸುಮಲತಾಗೆ ನಿಖಿಲ್​ ಎಚ್ಚರಿಕೆ

ಚುನಾವಣೆ ಹತ್ತಿರ ಬಂದಾಗ ಇಂತಹ ಆರೋಪಗಳನ್ನು ಮಾಡುತ್ತಾರೆ. ನಾವು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನೀವು ಗೌರವದಿಂದ ರಾಜಕಾರಣ ಮಾಡಿ. ಅಂಬರೀಷ್ ಅಣ್ಣನ ವ್ಯಕ್ತಿತ್ವ ನಂಗೆ ಗೊತ್ತು. ನನ್ನ ಬಗ್ಗೆಯೂ ಅವರಿಗೆ ಚೆನ್ನಾಗಿ ಗೊತ್ತಿತ್ತು ಎಂದರು.

ನಾನು ಆಣೆ ಪ್ರಮಾಣ ಮಾಡಲು ಸಿದ್ದನಿದ್ದೇನೆ. ಮೇಲುಕೋಟೆ ಚಲುವನಾರಾಯಣ ಸನ್ನಿಧಿಯಲ್ಲಿ ಅಂತ ಅವರೇ ಹೇಳಿದ್ದಾರೆ. ಇನ್ನು ದಿನಾಂಕ, ಸಮಯ ನಿಗದಿ ಮಾಡಿ ನಾನು ಬಂದು ಪ್ರಮಾಣ ಮಾಡುವೆ ಎಂದು ಪುಟ್ಟರಾಜು ಸವಾಲು ಹಾಕಿದರು.

Share This Article
Leave a comment