ಅನನ್ಯ ತರಬೇತಿ ಸಂಸ್ಥೆಗೆ ಭೇಟಿ ನೀಡಿದ್ದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಎಂಡಿ ಸುರೇಶ್ ಕುಮಾರ್

Team Newsnap
1 Min Read

ಮಂಡ್ಯ: ಕರ್ನಾಟಕ ರಾಜ್ಯದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮಾದ್ಯಮ ತರಬೇತಿಯನ್ನು ಮಂಡ್ಯದ ಅನನ್ಯ ಕ್ರಿಯೇಷನ್ಸ್ ಬೆಳ್ಳಿತೆರೆ ಮತ್ತು ಮಾದ್ಯಮ ತರಬೇತಿ ಸಂಸ್ಥೆಯಲ್ಲಿ ನಡೆಸಲಾಗುತ್ತಿದೆ.

ಈ ತರಬೇತಿಗೆ ಅನೇಕ ಜಿಲ್ಲೆಯ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ ನುರಿತ ಪತ್ರಕರ್ತ ಶಿಕ್ಷಕರಿಂದ ಪ್ರಾಯೋಗಿಕ ಮತ್ತು ಲಿಖಿತ ರೂಪದಲ್ಲಿ ತರಬೇತಿಯನ್ನು ಕೊಡಿಸಲಾಗುತ್ತಿದೆ. ಬಂದಂತಹ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

3 ತಿಂಗಳ ತರಬೇತಿಯಲ್ಲಿ ಈಗಾಗಲೇ 2 ತಿಂಗಳ ತರಬೇತಿ ಕಾರ್ಯಗಾರ ಮುಕ್ತಾಯಗೊಂಡಿದೆ, ಈ ವೇಳೆ ಅನನ್ಯ ಸಂಸ್ಥೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ದಿಢೀರ್ ಬೇಟಿ ನೀಡಿ ವಿದ್ಯಾರ್ಥಿಗಳು ಕಲಿಕೆ ಕುರಿತು ಮಾತನಾಡಿ ಟೆಲಿವಿಷನ್ ಜರ್ನಲಿಸಂ ಯೋಜನೆಯನ್ನು ಮುಂದುವರೆಸಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಈ ಯೋಜನೆ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯಕವಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದರು

ಟೆಲಿವಿಷನ್ ಜರ್ನಲಿಸಂ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸಮೃದ್ಧಿ ಯೋಜನೆ ಅಡಿಯಲ್ಲಿ ನಿಗಮದ ವತಿಯಿಂದ ಸ್ಟುಡಿಯೋ ನಿರ್ಮಿಸಿಕೊಂಡು ಜೀವನ ನಡೆಸುವುದಕ್ಕೆ ಸಹಾಯ ಧನ ನೀಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿ ವಾಹಿನಿಯ ನಿರೂಪಕ ರಾಘವ ಸೂರ್ಯ. ಅನನ್ಯ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ರಾಜೇಶ್ ರಾಂಪುರ .ಸೀನಿಯರ್ ಕ್ಯಾಮರಾ ಮ್ಯಾನ್ ಹೇಮಂತ್ ಕುಮಾರ್. ಮಂಡ್ಯ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಲೋಕೇಶ್ ಮೂರ್ತಿ. ಸಂಸ್ಥೆಯ ನಿರ್ದೇಶಕರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share This Article
Leave a comment