ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಭೂಸ್ವಾಧೀನದಲ್ಲಿ ಸಿಇಓ ಕಚೇರಿಯಲ್ಲಿ ಸಭೆ ಮಾಡುವ ರಾಜಕಾರಣಿಯ ಆಪ್ತರೇ ದಲ್ಲಾಳಿಗಳಾಗಿ ಅವ್ಯವಹಾರ ಮಾಡಿದ್ದಾರೆಂದು ಸಂಸದೆ ಸುಮಲತಾ ಅಂಬರೀಶ್ ಹೆಸರು ಹೇಳದೇ ಮಂಗಳವಾರ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು.
ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವೀಂದ್ರ ಜನರ ಬಳಿ ಹೋಗದೆ ಕಚೇರಿಯಲ್ಲಿ ಕೂತು ಹೋಗುತ್ತಿರುವ ರಾಜಕಾರಣಿ ಹಾಗೂ ಕೇಂದ್ರ ಮಂತ್ರಿಗಳಿಗೆ ಅರ್ಜಿ ಕೊಟ್ಟು ಪೋಟೋ ತೆಗೆಸಿಕೊಂಡು ಜನರಿಗೆ ಮೋಸ ಮಾಡುತ್ತಿರುವ ರಾಜಕಾರಣಿಯ ಶಿಷ್ಯಂದಿರೇ ಹೆದ್ದಾರಿ ಭೂಸ್ವಾಧೀನದಲ್ಲಿ ದಲ್ಲಾಳಿಗಳಾಗಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.ಇದನ್ನು ಓದಿ -ಬಿಜೆಪಿ ಸರ್ಕಾರವನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ನಾನು ಹಳ್ಳಿಗಳ ಉದ್ಧಾರ ಮಾಡ್ತೀನಿ ಎಂದು ಹೇಳ್ತಾ ಸಿಇಓ ಕಚೇರಿಯಲ್ಲಿ ಮೀಟಿಂಗ್ ಮಾಡಿ ಹೋಗುವ ಆ ರಾಜಕಾರಣಿಯ ಆಪ್ತ 7 ಜನ ದಲ್ಲಾಳಿಗಳು ಹೆದ್ದಾರಿ ಅಕ್ರಮದಲ್ಲಿ ಭಾಗಿಯಾಗಿ ರೈತರಿಗೆ ಪರಿಹಾರ ಹಣದಲ್ಲಿ ಮೋಸ ಮಾಡಿದ್ದಾರೆ.ಅವರು ರೈತರ ಜೊತೆ ಮಾತನಾಡಿರುವ ಆಡಿಯೋ ನಮ್ಮ ಬಳಿ ಇದೆ ಎಂದು ಕಿಡಿಕಾರಿದರು.
ಆ ರಾಜಕಾರಣಿ ಇಲ್ಲಿವರೆಗೂ ಜಿಲ್ಲೆಗೆ ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ.ಪ್ರವಾಸೋದ್ಯಮಕ್ಕೆ ವಿಶ್ವದಲ್ಲಿ ಹೆಸರುವಾಸಿಯಾದ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಎಕ್ಸ್ ಪ್ರೆಸ್ ರೈಲು ನಿಲ್ಲಿಸುವ ಕೆಲಸ ಮಾಡಿಸಲು ಇವರಿಗೆ ಆಗಲಿಲ್ಲ.ಅವರ ಪಟಾಲಂ ಜಿಲ್ಲೆಯಲ್ಲಿ ಎಲ್ಲಿ ಕ್ವಾರೆ ನಡೀತಿದೆ ಎಂದು ನೋಡಿ ಬರೋ ಕೆಲಸ ಮಾಡ್ತಿದ್ದಾರೆ.
ಇವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ವಸ್ತುಗಳು ಸಿಗದೆ ಜಿಲ್ಲೆಯ ಅಭಿವೃದ್ಧಿ ಆಗ್ತಿಲ್ಲ.ಅಧಿಕಾರಿಗಳಿಗೆ ಹೆದರಿಸುತ್ತ ದಲ್ಲಾಳಿ ಕೆಲಸ ಮಾಡ್ತಿದ್ದಾರೆ.ಇವರಿಗೆ ಸ್ವಲ್ಪನಾದ್ರೂ ಏನಾದರೂ ಮರ್ಯಾದೆ ಇದ್ರೆ ಇದನ್ನ ನಿಲ್ಲಿಸಬೇಕು ಎಂದರು.
ಮೇಲುಕೋಟೆಯಲ್ಲಿ ಸುಮಲತಾ ಆಣೆ, ಪ್ರಮಾಣಕ್ಕೆ ಜೆಡಿಎಸ್ ಶಾಸಕರನ್ನು ಆಹ್ವಾನಿಸಿದ್ದ ವಿಚಾರಕ್ಕೆ ಗರಂ ಆದ ರವೀಂದ್ರ ಶ್ರೀಕಂಠಯ್ಯ, ಏಟ್ರಿಯಾ ಹೋಟೆಲ್ ನಲ್ಲಿ ವ್ಯಾಪಾರ ಮಾಡಲು ಯಾರು ಹೋಗಿ ಕುಳಿತಿದ್ರು?
ಏನಕ್ಕೆ ಕಳಿಸಿದ್ರು ಅವರ ಬೆಂಬಲಿಗರನ್ನು? ಸುಮ್ಮನೆ ಕಳಿಸಿದ್ರಾ? ಬೆಂಗಳೂರಿನ ಏಟ್ರಿಯಾ ಹೋಟೆಲ್ ಗೆ ವ್ಯಾಪಾರ ಮಾಡಲು ಇವರ ಬೆಂಬಲಿಗರನ್ನ ಕಳುಹಿಸಿ ನಂತರ ಸಿಲುಕಿಕೊಂಡ ಮೇಲೆ ಚೆಕ್ ಮಾಡಲು ಕಳುಹಿಸಿದ್ದೆ ಎಂದಿದ್ದಾರೆ.
ಇಂತಹವರು ಆಣೆ, ಪ್ರಮಾಣ ಬೇರೆ ಮಾಡ್ತಿನಿ ಅಂತಾರಾ? ಅವರ ಆತ್ಮ ಗೌರವಕ್ಕೆ ಒಪ್ಪುವಂತ ಕೆಲಸ ಮಾಡಬೇಕು.
ಸುಮಲತಾ ಅವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನಾನು ಹೇಳ್ತಿಲ್ಲ, ಆದ್ರೆ ಅವರ ಸುತ್ತ ಇರುವವರು ಈ ರೀತಿ ದಲ್ಲಾಳಿಗಳ ಕೆಲಸ ಮಾಡ್ತಿದ್ದಾರೆಂದು ಆರೋಪಿಸಿದರು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ