ಬಿಜೆಪಿ ಸರ್ಕಾರವನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Team Newsnap
1 Min Read

ಸರ್ಕಾರ ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಈ ಬಿಜೆಪಿ ಸರ್ಕಾರವನ್ನು ನಾವು ಯಾರೂ ಪ್ರಶ್ನೆ ಮಾಡುವಹಾಗಿಲ್ಲ. ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು.

ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಬಳ್ಳಾರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಆ. 15 ರಂದು ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ನಾಯಕ ರಾಹುಲ್ ಗಾಂಧಿ ನಿಮ್ಮೆಲ್ಲರನ್ನುದ್ದೇಶಿ ಮಾತನಾಡಲಿದ್ದಾರೆ ಎಂದು ಹೇಳಿದರು.

ಈ ಸರ್ಕಾರ ನಮ್ಮ ಕಾರ್ಯಕರ್ತರು ನಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತಿದೆ, ನಾಗರಿಕರಿಗೆ ದೊಡ್ಡ ಹೊಡೆತ ನೀಡಿದೆ. ಸರ್ಕಾರ ತಪ್ಪು ಮಾಡಿದಾಗ ಅದನ್ನು ಪ್ರಶ್ನೆ ಮಾಡುವುದು ಪ್ರತಿ ನಾಗರಿಕರ ಹಕ್ಕು. ಆದರೆ ಈ ಸರ್ಕಾರವನ್ನು ನಾವು ಯಾರೂ ಪ್ರಶ್ನೆ ಮಾಡುವ ಹಾಗೆ ಇಲ್ಲ. ಮೋದಿ , ಅಮಿತ್ ಶಾ , ಬೊಮ್ಮಾಯಿ , ಅವರನ್ನ ನಾವು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದು ಭ್ರಷ್ಟಾಚಾರ ಸರ್ಕಾರ, ಇವರು ತಮ್ಮ ಅಪ್ಪನ ದುಡ್ಡು ಹೊಡೀತಿಲ್ಲ. ಅದು ನಮ್ಮ ದುಡ್ಡು, ನಾಗರಿಕರ ದುಡ್ಡು ಲೂಟಿ ಮಾಡುತ್ತಿದ್ದಾರೆ. ಇದು 40 ಪರ್ಸೆಂಟ್ ಸರ್ಕಾರ. ಇದನ್ನು ನಾವು ಪ್ರಶ್ನೆ ಮಾಡಿದ್ರೆ ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a comment