May 29, 2022

Newsnap Kannada

The World at your finger tips!

Praveen Shivamogga

2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಪ್ರವೀಣ್

Spread the love

2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು. ಶಿವಮೊಗ್ಗದಲ್ಲಿ ಕಳೆದ ರಾತ್ರಿ ಬಜರಂಗದಳದ ಕಾರ್ಯಕತ೯ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಧಂತೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ.

ಹರ್ಷನ ಕೊಲೆಗೆ ಎರಡು ವರ್ಷಗಳ ಹಿಂದೆಯೇ ಸುಪಾರಿ ಕೊಟ್ಟಿದ್ದರು ಎಂದು ಮೃತನ ಸಂಬಂಧಿ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಬಳಿ ಹತ್ಯೆಯಾದ ಯುವಕನ ಸಂಬಂಧಿ ಪ್ರವೀಣ್ ಮಾತನಾಡಿ ಹಷ೯ನನ್ನು ಹೊಡೆದು ಹಾಕಿದ್ದಾರೆ ಅಷ್ಟೇ. ಇವನನ್ನು ಹೊಡೆದು ಹಾಕಿದರೆ 10 ಲಕ್ಷ ರೂ. ಕೊಡ್ತೀನಿ ಅಂತ 2 ವರ್ಷದಿಂದಲೂ‌ ಮುಸ್ಲಿಮರು ಹೇಳುತ್ತಿದ್ದರು. ಯಾರು ಹೊಡೆದು ಹಾಕಿದ್ದಾರೆ ಅಂತ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಪೊಲೀಸರು ಏನು ತನಿಖೆ ಮಾಡುತ್ತಾರೋ ಅದರ ಆಧಾರದ ಮೇಲೆ ನಮಗೆ ಗೊತ್ತಾಗಬೇಕು. ಎರಡು ವರ್ಷದಿಂದಲೂ ಈ ಜಿದ್ದು ಇದ್ದೇ ಇದೆ ಎಂದು ಪ್ರವೀಣ್‌ ಮಾಹಿತಿ ನೀಡಿದ್ದಾನೆ.

ಹರ್ಷ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ ಎಂದರು.

ಓವ೯ನ ಬಂಧನ : ನಾಲ್ವರಿಗೆ ಶೋಧ

ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣವಾಗಿ ಐದು ಮಂದಿ ಕೃತ್ಯ ಎಸಗಿದ್ದಾರೆ
ಈ ಪೈಕಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಶಿವಮೊಗ್ಗದ ಕ್ಲಾರ್ಕ್ ಪೇಟೆ ಮೂಲದ ಆರೋಪಿಯಾಗಿದ್ದಾನೆ. ದೊಡ್ಡಪೇಟೆ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಆರೋಪಿಯು ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದ್ದು, ಐದು ಮಂದಿ ಮಚ್ಚು ಲಾಂಗುಗಳಿಂದ ಹರ್ಷನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

error: Content is protected !!