January 29, 2026

Newsnap Kannada

The World at your finger tips!

MP,mandya,election

Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

Spread the love

ಇಂದು ಅಭಿಮಾನಿಗಳ ಮಹತ್ವದ ಸಭೆ

ಮಂಡ್ಯ ಸಂಸದೆ ಸುಮಲತಾ ಯಾವ ಪಕ್ಷ ಸೇರುತ್ತಾರೆ ಎಂಬ ಕುತೂಹಲಗಳಿಗೆ ಉತ್ತರ ಕಂಡುಕೊಳ್ಳಲು ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಅಭಿಮಾನಿಗಳು ಮಹತ್ವದ ಸಭೆಯನ್ನು ಇಂದು (ಮಂಗಳವಾರ) ಕರೆದಿದ್ದಾರೆ.

ಸುಮಲತಾ ಕಳೆದ ಲೋಕಸಭಾ ಚುನಾವಣೆ ಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ, ರಾಜ್ಯ ರೈತ ಸಂಘ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿಂದೆ ನಿಂತು ಸುಮಲತಾ ಗೆಲುವಿಗೆ ಕಾರಣರಾಗಿದ್ದರು.ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ಮುಂದಿನ ಮೇ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ಕೊಡ್ತಾರಾ ಎಂಬ ಚರ್ಚೆಯಾಗುತ್ತಿದೆ

ಆ ಚರ್ಚೆಗೆ ಪುಷ್ಠಿ ನೀಡುವಂತೆ ಸಂಸದೆ ಸುಮಲತಾ ಹೇಳಿಕೆಗಳನ್ನು ನೀಡುತ್ತಿದ್ದು, ಸಮಯ ಬಂದಾಗ ನಿರ್ಧಾರ ಮಾಡುತ್ತೇನೆ ಎನ್ನುತ್ತಿದ್ದಾರೆ.

ಯಾವಾಗ ಸಂಸದೆ ಸುಮಲತಾ ಆ ಹೇಳಿಕೆ ಕೊಟ್ಟರು ಇದೀಗ ಅವರ ಬೆಂಬಲಿಗರು ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ನಾಳೆ (ಮಂಗಳವಾರ ಬೆಳಗ್ಗೆ) 11 ಗಂಟೆಗೆ ಸುಮಲತಾ ಬೆಂಬಲಿಗರಾದ ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಭೆ ನಡೆಸಲು ವೇದಿಕೆ ರೂಪಿಸಿದ್ದಾರೆ

ಈ ಸಭೆಯಲ್ಲಿ ಸಂಸದೆ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಬೇಕು, ಬರೋದಿದ್ದರೆ ಯಾವ ಪಕ್ಷವನ್ನು ಸೇರ್ಪಡೆಯಾಗಬೇಕು ಎಂದು ಚರ್ಚಿಸಲಿದ್ದಾರೆ. ಬಳಿಕ ಸಂಸದೆ ಸುಮಲತಾಗೆ ಸಭೆಯ ನಿರ್ಣಯವನ್ನು ಮಂಡಿಸಿ ಅಂತಿಮವಾಗಿ ಸುಮಲತಾ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ ಎನ್ನಲಾಗುತ್ತಿದೆ.

error: Content is protected !!