ಶಿಕ್ಷಕಿ ಅಶ್ವಿನಿ ಅಂಗಡಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

Team Newsnap
1 Min Read
Savitribai Phule Award for teacher Ashwini Angadi ಶಿಕ್ಷಕಿ ಅಶ್ವಿನಿ ಅಂಗಡಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಗುಳೇದಗುಡ್ಡ ತಾಲೂಕು ರಾಘಾಪುರ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ಸಾಹಿತಿ ಅಶ್ವಿನಿ ಅಂಗಡಿ ಅವರಿಗೆ ದೆಹಲಿಯ ಅ.ಭಾ.ದಲಿತ ಸಾಹಿತ್ಯ ಅಕಾಡೆಮಿ ಕರ್ನಾಟಕ ಘಟಕದ ಈ ಸಾಲಿನ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಳಗಾವಿ ಸವಾಯಿ ಗಂಧರ್ವ ಸಾಹಿತ್ಯ ಭವನದಲ್ಲಿ ಭಾನುವಾರ ಜರುಗಿದ ದಲಿತ ಸಾಹಿತಿಗಳು ಹಾಗೂ ಚಿಂತಕರು ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅ.ಭಾ.ದಲಿತ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಸ್. ಪಿ.ಸುಮನಾಕ್ಷರ ಅಶ್ವಿನಿ ಅಂಗಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ 

ಕೆಪಿಸಿಸಿ ಕಾರ್ಯಾಧ್ಯಕ್ಷರು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯ ಅತಿಥಿಯಾಗಿದ್ದರು. ಭೂತರಾಮನಹಟ್ಟಿ ವಿರಕ್ತಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಿಡಿಎಸ್ ಎ ರಾಷ್ಟ್ರೀಯ ಸಂಯೋಜಕ ಸುಭಾಷ್ ಕಾನಡೆ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ.ಸಿ.ವೆಂಕಟೇಶ್, ಚಲುವರಾಜು, ಡಾ ಎಂ. ರಾಮಚಂದ್ರಪ್ಪ, ಬಿಡಿಎಸ್ ಎ ರಾಜ್ಯ ಘಟಕದ ಅಧ್ಯಕ್ಷ ಎಚ್. ಎಂ.ಕುಂದರಗಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಧುಮುಲ್ ಮುಂತಾದವರು ಉಪಸ್ಥಿತರಿದ್ದರು. ದಲಿತ ಸಾಹಿತಿಗಳು ಹಾಗೂ ಚಿಂತಕರು ಸಮಾವೇಶದಲ್ಲಿ ಭಾಗವಹಿಸಿದ್ದರು.

Share This Article
Leave a comment