May 22, 2022

Newsnap Kannada

The World at your finger tips!

sachhi s

ಬಿಜೆಪಿ ಸೇರಲು ಸಂಸದೆ ಸುಮಲತಾ ತಾಲೀಮು ಆರಂಭ ?

Spread the love

ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭೆಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಸುಮಲತಾ ಅವರ ಆಪ್ತರು ಬಿಜೆಪಿಗೆ ಸೇರಲು ಸಜ್ಜಾಗುತ್ತಿದ್ದಾರೆ. ಆ ಮೂಲಕ ಸುಮಲತಾ ಬಿಜೆಪಿ ಸೇರಲು ತಾಲೀಮು ಆರಂಭಿಸಿದ್ದಾರೆ.

ಮುಂದಿನ ಚುನಾವಣೆ ವೇಳೆಗೆ ಸುಮಲತಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಎಲ್ಲಿಯೂ ಸುಮಲತಾ ಬಹಿರಂಗವಾಗಿ ಈ ವಿಚಾರವನ್ನು ತಿಳಿಸಿಲ್ಲ. ಆದರೆ ಸುಮಲತಾ ಆಪ್ತರು ಮಾತ್ರ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾಗಿದೆ.

ಹುಟ್ಟುಹಬ್ಬದ ನೆಪದಲ್ಲಿ ಇಂಡುವಾಳು ಸಚ್ಚಿದಾನಂದ ಕ್ಷೇತ್ರದ ಇಂಡುವಾಳು ಗ್ರಾಮದಲ್ಲಿ ಭಾನುವಾರ ಭರ್ಜರಿ ಬಾಡೂಟ ಆಯೋಜಿಸಿದ್ದರು

ಆಪ್ತವಲಯ ಕೂಡ ಸಚ್ಚಿದಾನಂದ ಬಿಜೆಪಿ ಸೇರ್ಪಡೆ ಖಚಿತ ಎಂದು ಹೇಳುತ್ತಿದ್ದಾರೆ. ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸಂಸದೆ ಸುಮಲತಾ ಸುಳಿವು ಕೂಡ ನೀಡಿದ್ದಾರೆ.

error: Content is protected !!