ಮಂಡ್ಯ (Mandya) ಸಂಸದೆ ಸುಮಲತಾ, ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೈ ಅಭ್ಯರ್ಥಿಗೆ ತಮ್ಮ ಬೆಂಬಲಿಗರ ಮೂಲಕ ಸಾಥ್ ಕೊಟ್ಟು ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.
ಸಂಸದೆ ಸುಮಲತಾ ಸ್ವಾಭಿಮಾನಿ ಮತ ಪಡೆದು ಮೈತ್ರಿ ಅಭ್ಯರ್ಥಿ ನಿಖಿಲ್ ವಿರುದ್ದ ಗೆದ್ದು ಬೀಗಿದ್ದರು. ಆ ಗೆಲುವಿನ ಹಿಂದೆ ಬಿಜೆಪಿಯ ನೇರ ಬೆಂಬಲ ಇತ್ತು.. ಕಾಂಗ್ರೆಸ್ಸಿಗರ ಪರೋಕ್ಷ ಬೆಂಬಲವಿತ್ತು.. ಅದೇ ಇದೀಗ ಎಂಎಲ್ಸಿ ಚುನಾವಣೆಯಲ್ಲಿ ಸಂಸದೆ ಸುಮಲತಾ ಬೆಂಬಲ ಪಡೆಯಲು ಕೈ-ಕಮಲ ಅಭ್ಯರ್ಥಿಗಳು ಗಿರಕಿ ಹೊಡೆಯುತ್ತಿದ್ದಾರೆ.
ಸುಮಲತಾ ಮಾತ್ರ ನಾನು ತಟಸ್ಥವಾಗಿರುತ್ತೇನೆ.. ಆಶೀರ್ವಾದ ಮಾತ್ರ ಮಾಡ್ತೇನೆ ಎಂದಿದ್ದರು
ಆದರೆ ಈಗ ಬೆಂಬಲಿಗರ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎನ್ನುವ ಮಾತು ಕೇಳಿಬರ್ತಿದೆ
ಸಂಸದೆ ಸುಮಲತಾ ಬೆಂಬಲಿಗರ ಬೆಂಬಲದ ಬಲ ಕೈ ಅಭ್ಯರ್ಥಿಯ ಆತ್ಮವಿಶ್ವಾಸ ಹೆಚ್ಚಿಸಿ, ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸಂಸದ ಸುಮಲತಾ ನಡೆ ಈ ಬಾರಿ ಚುನಾವಣೆಯಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಶಾಕ್ ನೀಡಿದ್ದಾರೆ, ಅತ್ತ ಕಾಂಗ್ರೆಸ್ಗೆ ಫುಲ್ ಖುಷ್ ಆಗಿದೆ. ಇದರ ನಡುವೆ ಜೆಡಿಎಸ್ ಅಭ್ಯರ್ಥಿ ಸೋತರೆ ದಳಪತಿಗಳಿಗೆ ಮುಖಭಂಗ ಎದುರಿಸಬೇಕಾಗುತ್ತೆ.
ಈ ಬೆಂಬಲದ ಹಿಂದೆ ಸಂಸದೆ ಸುಮಲತಾರ ಮುಂದಿನ ರಾಜಕೀಯ ಭವಿಷ್ಯ ಕೂಡ ಅಡಗಿದೆ. ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್ ವೀಕ್ ಆಗ್ತಿದೆ. ಮುಂದೆ ಕಾಂಗ್ರೆಸ್ ಸೇರಿದರೆ ಅವಕಾಶಗಳು ಸಿಗುತ್ತೆ, ಅಧಿಕಾರವು ದಕ್ಕುತ್ತೆ ಅನ್ನೋ ಅಭಿಪ್ರಾಯ ಹೊಂದಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಿದ್ರೆ ದಳಪತಿಗಳಿಗೆ ಮುಖಭಂಗವು ಆಗುತ್ತೆ ಎಂಬ ತಂತ್ರ ಅಡಗಿದೆ. ಆದ್ರೆ ಈ ತಂತ್ರಗಾರಿಕೆಯ ಭಾಗವಾಗಿ ಬಿಜೆಪಿಗೆ ಶಾಕ್ ನೀಡಿದ್ದಾರೆ.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ