ಬೆಂಗಳೂರಿನಲ್ಲಿ 15 ತಿಂಗಳ ನಂತರ ಕೊರೊನಾ ಸೋಂಕಿತರ ಶವ ಪತ್ತೆ

Team Newsnap
1 Min Read

ಕೋವಿಡ್​ನಿಂದ(Covid – 19) ಮೃತರಾಗಿದ್ದ ಇಬ್ಬರ ಶವಗಳನ್ನು 15 ತಿಂಗಳ ನಂತರ ಹೊರತೆಗೆದ ಘಟನೆ ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ಜರುಗಿದೆ

ಕೋವಿಡ್​ ಏರಿಕೆ ಕಂಡ ಕಾಲಘಟ್ಟದಲ್ಲಿ ಸಂಬಂಧಿಕರೇ ತಮ್ಮವರ ಮೃತ ಶವಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಮ್ಮವರ ಸೋಂಕಿತ ಮೃತ ಶವದಿಂದ ತಮಗೆ ಕೊರೊನಾ ತಗುಲಬಹುದೆಂಬ ಭಯ ಹೆಚ್ಚಾಗಿತ್ತು. ಹೀಗಾಗಿ ಸರ್ಕಾರವೇ ಕಟ್ಟು ನಿಟ್ಟಿನ ಕ್ರಮಗಳ ಜೊತೆಗೆ ಶವವನ್ನು ಮಣ್ಣಲ್ಲಿ ಮಣ್ಣಾಗಿಸಲು ಮುಂದಾಗಿತ್ತು.

ಚಾಮರಾಜಪೇಟೆಯ ದುರ್ಗಾ(40)  ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು ಎಂಬುವವರು 2020ರ ಜುಲೈನಲ್ಲಿ ಕೊರೊನಾ ಸೋಂಕಿನಿಂದ ಬಳಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

ಈ ವೇಳೆ ಮೃತರ ಶವಗಳನ್ನು ಪಡೆಯಲು ಕುಟುಂಬಸ್ಥರು ಕೂಡ ಹಿಂದೆಟು ಹಾಕಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಎರಡು ಶವಗಳನ್ನು ಶವಾಗಾರದಲ್ಲಿಟ್ಟು ಮರೆತು ಬಿಟ್ಟಿದ್ದರು.

ಕೊಳೆತು ಗಬ್ಬು ವಾಸನೆ ಎದ್ದಿದ್ದು ಪರಿಶೀಲನೆ ನಡೆಸಿದಾಗ ಶವಾಗಾರದಲ್ಲಿ ಈ ಮೃತದೇಹಗಳಿರುವುದು ಕಂಡು ಬಂದಿದೆ.
ಸದ್ಯ ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

Share This Article
Leave a comment