ಸುಮಲತಾ – ಪುಟ್ಟರಾಜು ವಾಕ್ ಸಮರ : ಲೀಡರ್ ಆಗಬೇಕಾದರೆ ಜೆಡಿಎಸ್ ವಿರುದ್ದ ಮಾತನಾಡಲಿ : ಸಿಎಸ್ ಪಿ

Team Newsnap
3 Min Read
Sumalatha-Puttaraju speech battle: If you want to become a leader, let him speak against JDS: CSP ಸುಮಲತಾ - ಪುಟ್ಟರಾಜು ವಾಕ್ ಸಮರ : ಲೀಡರ್ ಆಗಬೇಕಾದರೆ ಜೆಡಿಎಸ್ ವಿರುದ್ದ ಮಾತನಾಡಲಿ : ಸಿಎಸ್ ಪಿ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಶಾಸಕ ಸಿ.ಎಸ್ ಪುಟ್ಟರಾಜು ಅವರ ನಡುವೆ ವಾಕ್ ಸಮರ ಮುಂದುವರಿದಿದೆ, ಪುಟ್ಟರಾಜು ವಿರುದ್ಧ ವಾಗ್ದಾಳಿ ಮಾಡಿದ್ದ ಸುಮಲತಾಗೆ ಮಂಡ್ಯ ಜಿಲ್ಲೆಯ ಜನ ಸಾಕಷ್ಟು ಜನರಿಗೆ ಬುದ್ಧಿ ಕಲಿಸಿದ್ದಾರೆ. ನಿಮಗೂ ಸಹ ಬುದ್ಧಿ ಕಲಿಸುತ್ತಾರೆ ಎನ್ನುವ ಮೂಲಕ ಶಾಸಕ ಪುಟ್ಟರಾಜು ಮತ್ತೆ ತಿರುಗೇಟು ನೀಡಿದ್ದಾರೆ.

ತಾಕತ್ ಇದ್ರೆ ಗಣಿಗಾರಿಕೆ ವಿಚಾರದಲ್ಲಿ ರಾಜಧನ ವಂಚಿಸುತ್ತಿರುವವರ ಹೆಸರು ಹೇಳಬೇಕು, ಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಪ್ರಾರಂಭದಲ್ಲಿ ಪುಟ್ಟರಾಜು ಸವಾಲು ಹಾಕಿದ್ದರು.ಮಂಡ್ಯದಲ್ಲಿ ಅಶೋಕ್ ವಿರುದ್ದ ಗೋಬ್ಯಾಕ್ ಅಭಿಯಾನ- ವರಿಷ್ಠರಿಗೆ ವರದಿ

ಈ ಹೇಳಿಕೆಗೆ ಪೂರಕವಾಗಿ ಸಂಸದೆ ಸುಮಲತಾ ಅಂಬರೀಶ್ ನನ್ನ ತಾಕತ್ತನ್ನು ನನ್ನ ಚುನಾವಣೆಯಲ್ಲಿ ತೋರಿಸಿದ್ದೇನೆ ಮತ್ತೆ ತೋರಿಸುವ ಅಗತ್ಯವಿಲ್ಲ ಎನ್ನುವ ಮೂಲಕ ಸುಮಲತಾ ಖಡಕ್ ಆಗಿ ಉತ್ತರ ನೀಡಿದ್ದರು.

ಇದೀಗ ಸುಮಲತಾ ಹೇಳಿಕೆಗೆ ಪುಟ್ಟರಾಜು ಕೌಂಟರ್ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಜನ ಬಹಳಷ್ಟು ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ್ದಾರೆ ಸೋಲು ಗೆಲುವನ್ನು ಎಲ್ಲರಿಗೂ ಜನ ತೋರಿಸಿದ್ದಾರೆ, ಭಾಷಣ ಮಾಡುವ ಅಗತ್ಯ ಬೇಡ. ನಾನು ಎಂಪಿಯಾಗಿದ್ದೆ, ದಿಶಾ ಸಭೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿಚಾರಿಸೋದು ಅಷ್ಟೇ ಆದ್ರೆ ಸಭೆಯಲ್ಲಿ ಬೇರೆ ವಿಚಾರಗಳನ್ನು ಮಾತಾಡುತ್ತೀರಾ. ಪರ್ಟಿಕ್ಯುಲರ್ ಆಗಿ ಏನಾದರೂ ಇದ್ದರೆ ಹೆಸರು ಹೇಳಿ ಮಾತಾಡಬೇಕು ಪಾಂಡವಪುರ ಕ್ಕೆ ಬಂದಾಗಲೇ ರಾಜಧನವನ್ನು ನಾನು ಕಡಿದು ಎತ್ತಾಕಿದ್ದೇನೆ ಎನ್ನುತ್ತಾರೆ.

ನನ್ನ ಕ್ಷೇತ್ರದಲ್ಲಿ ಬಂದು ರಾಜಧನ ಏನೋ ಆಗಿದೆ ಅಂದ್ರೆ ಯಾರಿಗೆ ಅವರು ಮಾತನಾಡೋದು ಹಾಗೆ ಮಾತನಾಡಿದ್ರೆ ಅದು ನನಗೆ ತಾನೇ. ಅದಕ್ಕೆ ನಾನು ತಾಕತ್ ಇದ್ರೆ ಹೆಸರು ಬಹಿರಂಗಪಡಿಸಬೇಕು ಎಂದು ಹೇಳಿದ್ದೇನೆ. ಈಗಲೂ ಕೇಳುತ್ತೇನೆ ತಾಕತ್ ಇದ್ರೆ ಹೆಸರು ಬಹಿರಂಗ ಪಡಿಸಬೇಕು. ನಾನು ಗಣಿ ಇಲಾಖೆಗೆ ಹೋಗಿ ನೋಡುವ ಕೆಲಸ ನನ್ನದು ಅಲ್ಲ ಆರೋಪ ಮಾಡಿರೋದು ನೀವು, ನೀವು ಹೋಗಿ ನೋಡಿ. ಸರ್ಕಾರ ಇದೆ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ನೀವು ಚುನಾವಣೆ ಹೋಗಬೇಕು, ಯಾವ ಪಾರ್ಟಿಯಲ್ಲಿ ನಿಲ್ಲುತ್ತೀರಾ ಎಂದು ಹೇಳಬೇಕು ಎಲ್ಲಿ ಏನೇನು ರಾಜಕಾರಣ ಮಾಡ್ತಾ ಇದೀರಾ ಎಂದು ಗೊತ್ತು. ಯಾವ ಪಕ್ಷದವರು ಏನು ಹೇಳಬೇಕು ಎಲ್ಲಾ ಹೇಳಿದ್ದಾರೆ. ಬಿಜೆಪಿ ಅವರ ಬಳಿ ಏನು ಕೇಳಿದ್ದಾರೆ, ಅವರು ಏನ್ ರಿಜೆಕ್ಟ್ ಮಾಡಿದ್ದಾರೆ ಎಲ್ಲಾ ಗೊತ್ತು. ಮಂಡ್ಯ ಜಿಲ್ಲೆಯ ಜನ ಅಂಬರೀಶ್ ಅಣ್ಣನಿಗೂ ಬುದ್ಧಿ ಕಲಿಸಿದ್ದಾರೆ, ನನ್ನನ್ನು 2 ಸಲ ಸೋಲಿಸಿದ್ದಾರೆ. ಜೆಡಿಎಸ್‍ನ್ನು ದೂರಿದರೆ ಲೀಡರ್ ಅಂತಾ ಹೇಳ್ತಾರೆ ಅಂತಾ ಸುಮಲತಾ ಅಂದುಕೊಂಡಿದ್ದಾರೆ. ಮಂಡ್ಯ ಜನ ಒಂದು ಅಂಬರೀಶ್ ಅಣ್ಣನ ಅಭಿಮಾನಕ್ಕೆ ಗೆಲ್ಲಿಸಿದ್ದಾರೆ ಎಂದರು

ಸುಮಲತಾ ಹೆಸರಿಗಾಗಿ ಜನರು ಗೆಲ್ಲಿಸಿಲ್ಲ. ಮುಂದೆ ಇವರು ಮಾಡಿರುವ ಕೆಲಸಕ್ಕೆ ಮಂಡ್ಯ ಜಿಲ್ಲೆಯ ಜನ ತೋರಿಸುತ್ತಾರೆ ಇವರು ಮಾಡಿರುವ ಕೆಲಸಕ್ಕೆ ಜನರೇ ಸರ್ಟಿಫಿಕೇಟ್ ಕೊಡ್ತಾರೆ. ಅವರ ಬಗ್ಗೆ ಮಾತಾಡಿದ್ರೆ ನಮಗೆ ಮೈಲೇಜ್ ಬರಲ್ಲ ನಮ್ಮ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಮಂಡ್ಯದಲ್ಲಿ ದೇವೇಗೌಡರು, ಕುಮಾರಣ್ಣನ ಗುಣಗಾನ ಮಾಡಿದ್ರೆ ಮೈಲೇಜ್ ಬರುತ್ತದೆ. ಇವರ ಬಗ್ಗೆ ಮಾತನಾಡಿದ ಮೈಲೇಜ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಜೆಡಿಎಸ್ ಬಗ್ಗೆ ಮಾತಾನಾಡಿದ್ರೆ ನನ್ನ ಲೀಡರ್ ಮಾಡ್ತಾರೆ ಎಂದುಕೊಂಡಿದ್ದಾರೆ.

ರಾಜ್ಯದಲ್ಲಿ 40% ಸರ್ಕಾರ ಎಂದು ಹೇಳಲಾಗುತ್ತೆ, ಇದರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಬರೀ ಇಲ್ಲಸಲ್ಲದ ನಾಟಕಗಳನ್ನು ಮಾಡಿಕೊಂಡು ಮಾತಾಡಿದ್ರೆ ಪ್ರಯೋಜನವಿಲ್ಲ. ಸದಾ ಸುದ್ದಿಯಲ್ಲಿ ಇರಬೇಕು ಎಂದು ಜೆಡಿಎಸ್ ಬಗ್ಗೆ ಸುಮಲತಾ ಮಾತಾನಾಡುತ್ತಾರೆ. ಇದಕ್ಕೆ ಕಾಲ ಸನಿಹಕ್ಕೆ ಬಂದಿದೆ, ಜನರೇ ಉತ್ತರ ಕೊಡ್ತಾರೆ. ಯಾವ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಬೇಕು ಅದನ್ನು ಬಿಟ್ಟು ನಮ್ಮ ಬಗ್ಗೆ ಏಕೆ ಮಾತಾಡಬೇಕು. ಮಂಡ್ಯ ಜಿಲ್ಲೆಯ ಜನ ದೇವೇಗೌಡ (HD Devegowda) ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಇವರಿಗೆ ಏನು ಗೊತ್ತು. ಸೆರೆಗೊಡ್ಡಿ ಮತಕೇಳಿದ್ರು ಅಂತಾ ಜಿಲ್ಲೆಯ ಜನ ಅನುಕಂಪದಲ್ಲಿ ಅಂಬರೀಶ್ ಅಣ್ಣನ ಮುಖ ನೀಡಿ ಮತ ಹಾಕಿದ್ರು. ಇವರು ಮಾಡಿರುವ ಕೆಲಸವನ್ನು ಜನ ತೋರಿಸುತ್ತಾರೆ, ಬರಲಿ ಈ ಸಲ ಹಳ್ಳಿಗೆ ಜನರೇ ಹೇಳುತ್ತಾರೆ ಎಂದು ಪುಟ್ಟರಾಜು ಹೇಳಿದರು.

Share This Article
Leave a comment