ಮಂಡ್ಯದಲ್ಲಿ ಅಶೋಕ್ ವಿರುದ್ದ ಗೋಬ್ಯಾಕ್ ಅಭಿಯಾನ- ವರಿಷ್ಠರಿಗೆ ವರದಿ

Team Newsnap
1 Min Read
Mandya District Minister R. Ashok is out of responsibility ಮಂಡ್ಯ ಜಿಲ್ಲಾಮಂತ್ರಿ ಜವಾಬ್ದಾರಿಯಿಂದ ಸಚಿವ ಆರ್ . ಅಶೋಕ್ ಔಟ್

ಕಂದಾಯ ಸಚಿವ ಆರ್.ಅಶೋಕ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿದ್ದರ ಪರಿಣಾಮ ಕೊನೆಗೂ ಅದರ ಬಿಸಿ ಮಂಡ್ಯದಲ್ಲಿ ತಟ್ಟೆ ಬಿಟ್ಟಿದೆ.

ತಮ್ಮ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ನ ಪರಿಣಾಮ ಈ ಪರಿ ಇರುತ್ತೆ ಅಂತ ಖುದ್ದು ಅಶೋಕ್ ಅವರೇ ಎಣಿಸಿರಲಿಕ್ಕಿಲ್ಲ.ಡಿಕೆಶಿಗೆ ‘ಗೂಳಿ’ ಗಿಫ್ಟ್‌ ಕೊಟ್ಟ ಮಂಡ್ಯದ ‘ಕೈ’ ಕಾರ್ಯಕರ್ತರು

ಈ ಸಾಮ್ರಾಟ್ ವಿರುದ್ಧ ಸ್ವಪಕ್ಷೀಯರೇ ಗೋ ಬ್ಯಾಕ್ ಬಾಯ್ಕಾಟ್ ಅಶೋಕ್ ಅಭಿಯಾನ ನಡೆಸ್ತಿರುವುದು ಬಿಜೆಪಿಗೆ ದೊಡ್ಡ ತಲೆಬಿಸಿ ಆದಂತಿದೆ. ಮಂಡ್ಯ ಕಾರ್ಯಕರ್ತರ ಈ ವಿರೋಧ ಕುರಿತು ರಾಜ್ಯ ಬಿಜೆಪಿ ಘಟಕವು ಹೈಕಮಾಂಡ್ ಗಮನಕ್ಕೆ ತಂದಿದೆ.

ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಜರುಗುತ್ತಿರುವ ವಿದ್ಯಮಾನಗಳ ಕುರಿತು ಹೈಕಮಾಂಡ್ ಗೆ ರಾಜ್ಯ ಘಟಕದಿಂದ ವರದಿ ರವಾನಿಸಲಾಗಿದೆ.

ವರಿಷ್ಠರ ಗಮನಕ್ಕ ಸಮಸ್ಯೆ ತರುವ ಮೂಲಕ ಮುಂದಿನ ತೀರ್ಮಾನ ಈಗ ದೆಹಲಿ ನಾಯಕರ ಹೆಗಲಿಗೇರಿದಂತಾಗಿದೆ.

Share This Article
Leave a comment