‘ಗೂಳಿ'(ಎತ್ತು)ಯಂತೆ ನುಗ್ಗಿ ರಾಜ್ಯದ ಮುಖ್ಯಮಂತ್ರಿಯಾಗಿ’ ಎಂದು ಹಾರೈಸಿ ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಗೂಳಿಯನ್ನು ಉಡುಗೊರೆ ನೀಡಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.ಡಬಲ್ ಹಣ ನೀಡುವುದಾಗಿ ನಿವೃತ್ತ ನೌಕರರಿಗೆ ಬ್ಯಾಂಕ್‌ನಿಂದ ಪಂಗನಾಮ
ಬೃಹತ್ ಗಾತ್ರದ ಅನಾನಸ್ ಹಾರ, ಕಬ್ಬಿನ ಹಾರ, ಸೇಬು ಹಾರ ಸೇರಿದಂತೆ ನಾನಾ ಬಗೆಯ ಹಾರಗಳನ್ನು ಹಾಕಿ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ವಾಗತಿಸಿ ತಮ್ಮ ಅಭಿಮಾನವನ್ನು ತೋರಿಸಿದರು.
ಬಿಳಿ ಬಣ್ಣದ ಗೂಳಿಗೆ ಸಿಂಗಾರ ಮಾಡಿಕೊಂಡು ಕರೆತಂದ ಕಾರ್ಯಕರ್ತರು ಡಿ.ಕೆ ಶಿವಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೂಳಿಯಂತೆ ನುಗ್ಗಿ ರಾಜ್ಯದ ಮುಖ್ಯಮಂತ್ರಿಯಾಗಿ ಎಂದು ಶುಭ ಹಾರೈಸಿದ್ದಾರೆ.
ಗುರುವಾರ (ಜನವರಿ 26) ಯಾತ್ರೆ ಮೈಸೂರಿಗೆ ತೆರಳಿದ್ದಾಗ ಸಿದ್ದರಾಮಯ್ಯ ಅವರಿಗೆ ಅವರ ಕಟ್ಟಾ ಅಭಿಮಾನಿಯೊಬ್ಬ 2.5 ಲಕ್ಷ ರೂಪಾಯಿ ಖರ್ಚು ಮಾಡಿ 750 ಕೆಜಿಯ ‘ಮೈಸೂರು ಪಾಕ್’ ಹಾರ ತಯಾರಿಸಿದ್ದರು. ಆದರೆ, ತಿನ್ನುವ ಆಹಾರವನ್ನು ಕೊರಳಿಗೆ ಹಾಕಬಾರದೆಂದು ಅಭಿಮಾನಿಗೆ ಕಿವಿಮಾತು ಹೇಳಿ ಸಿದ್ದಾರಾಮಯ್ಯ ಹಾರವನ್ನು ತಿರಸ್ಕರಿಸಿದ್ದರು.
- ಬೆಳ್ಳೂರು ಸಮೀಪ ಸಾರಿಗೆ ಬಸ್ ಗೆ ಕಾರು ಢಿಕ್ಕಿ : ನಾಲ್ವರ ಸಾವು
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ