ಮಂಡ್ಯದ ದಿಶಾ ಸಭೆಯಲ್ಲೂ ಸುಮಲತಾ – ಜೆಡಿಎಸ್ ಶಾಸಕರ ನಡುವೆ ವಾಕ್ ಸಮರ

Team Newsnap
1 Min Read

ಮಂಡ್ಯ ರಾಜಕಾರಣ ತಾರಕಕ್ಕೆ ಏರಿದೆ. ಜಿಲ್ಲೆಯ ದಳಪತಿ ಹಾಗೂ ಸಂಸದೆ ಸುಮಲತಾ ಸಮರ ನಡೆಯುತ್ತಲೇ ಇರುತ್ತೆ. ನಿನ್ನೆ ರಾತ್ರಿ ತನಕ ನಡೆದ ದಿಶಾ ಸಭೆಯಲ್ಲಿ ಇಂತಹ ಸಮರಕ್ಕೆ ಸಾಕ್ಷಿಯಾಯಿತು.

ಕೇವಲ ಚುನಾವಣೆ ಸಂದರ್ಭದಲ್ಲಷ್ಟೇ ಅಲ್ಲ ಸರ್ಕಾರಿ ಸಭೆಗಳಲ್ಲೂ ಆ ವಾಕ್ಸಮರ ಇದ್ದೇ ಇರುತ್ತೆ ,ಸಭೆಗೆ 2 ಗಂಟೆ ತಡವಾಗಿ ಬಂದ ಸಂಸದೆ ಸುಮಲತಾ ವಿರುದ್ಧ ದಳ ಶಾಸಕರು ಆಕ್ರೋಶ ಹೊರ ಹಾಕಿದರು. ಅದೇ ಸಿಟ್ಟನ್ನು ಅಧಿಕಾರಿಗಳ ಮೇಲೆ ತೋರಿದರು.

ಜೆಡಿಎಸ್​​​ ಶಾಸಕರು ಹಾಗೂ ಸಂಸದೆ ಸುಮಲತಾ ನಡುವೆ ಸಮರ ಸಾಮಾನ್ಯ. ಅವಕಾಶ ಸಿಕ್ಕಲ್ಲೆಲ್ಲಾ ಹೊತ್ತಿ ಉರಿಯುತ್ತಿದೆ. ಇದಕ್ಕೆ ನಿನ್ನೆ ಮಂಡ್ಯ ಜಿ.ಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆ ಹೊರತಾಗಿರಲಿಲ್ಲ.

ಮಧ್ಯಾಹ್ನ 2 ಗಂಟೆಗೆ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಸುಮಲತಾ 4 ಗಂಟೆಗೆ ಆಗಮಿಸಿದರು.

ಇದು ಜೆಡಿಎಸ್ ಶಾಸಕರನ್ನು ಕೆರಳುವಂತೆ ಮಾಡಿತು.ಕಾದು ಕಾದು ಸುಸ್ತಾದ ದಳ ಶಾಸಕರು ಸುಮಲತಾ ಮೇಲಿನ ಸಿಟ್ಟನ್ನು ಹೊರಹಾಕಿ. ಸುಮಲತಾ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು

ಈ ವೇಳೆ ಸುಮಲತಾ ಬೆಂಬಲಕ್ಕೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬೇಲೂರು ಸೋಮಶೇಖರ್ ಮಧ್ಯ ಪ್ರವೇಶಿಸಿದ್ದು ಸಭೆಯಲ್ಲಿ ಮತ್ತಷ್ಟು ಗದ್ದಲ, ಕೋಲಾಹಲಕ್ಕೆ ನೆಪವಾಯಿತು.

ಈ ಗದ್ದಲದ ನಡುವೆ ಆರಂಭವಾದ ಸಭೆಯಲ್ಲಿ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ರಸ್ತೆಯಲ್ಲಿನ ಗುಂಡಿ ಮುಚ್ಚಿ, ಇಲ್ಲದಿದ್ದರೆ ಮರಕ್ಕೆ ಕಟ್ಟಿಸ್ತೀನಿ ಅಂತ ಸಂಸದೆ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಮಾಮೂಲಿಯಂತೆ ಗಣಿಗಾರಿಕೆ ವಿಚಾರ ಚಚೆ೯ಗೆ ಬಂತು . ಗಣಿಗಾರಿಕೆ, ಕ್ರಷರ್ ನಡೆಸಲು ಅಧಿಕಾರಿಗಳು ಬಿಡುತ್ತಿಲ್ಲ ಕಟ್ಟಡ, ಅಭಿವೃದ್ದಿ ಕೆಲಸಗಳಿಗೆ ಮೆಟಿರಿಯಲ್ ಸಿಕ್ತಿಲ್ಲ ಎಂದು ಶಾಸಕ ಸುರೇಶ್ ಗೌಡ ಗಣಿ ಇಲಾಖೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡಿಯಿತು.

Share This Article
Leave a comment