ನಾಳೆ ಹಿಮಾಚಲ ಪ್ರದೇಶ ಸಿಎಂ ಆಗಿ ಸುಖವೀಂದ್ರ, ಡಿಸಿಎಂ ಅಗ್ನಿಹೋತ್ರಿ ಪ್ರಮಾಣ ವಚನ

Team Newsnap
1 Min Read
Sukhvinder as CM and Agnihotri as DCM to sworn tomorrow at Himachal pradesh ನಾಳೆ ಹಿಮಾಚಲ ಪ್ರದೇಶ ಸಿಎಂ ಆಗಿ ಸುಖವೀಂದ್ರ, ಡಿಸಿಎಂ ಅಗ್ನಿಹೋತ್ರಿ ಪ್ರಮಾಣ ವಚನ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್​ ಹೈಕಮಾಂಡ್ ಒಂದಷ್ಟು ಕಸರತ್ತು, ಸಭೆ, ಚರ್ಚೆಗಳ ಬಳಿಕ ಸುಖವಿಂದರ್ ಸಿಂಗ್ ಸುಖು ಅವರನ್ನು ಮುಖ್ಯಮಂತ್ರಿಯ ಸ್ಥಾನಕ್ಕೆ ಆಯ್ಕೆ ಮಾಡಿದೆ.

ಸಿಎಂ ಜೊತೆಯಲ್ಲಿ ಮುಕೇಶ್ ಅಗ್ನಿಹೋತ್ರಿಗೆ ಉಪಮುಖ್ಯಮಂತ್ರಿ ನೀಡಲು ತೀರ್ಮಾನಿಸಲಾಗಿದೆ ಎಂದು ಚತ್ತೀಸ್​ಗಢ ಸಿಎಂ ಭೂಪೇಶ್ ಬಗೇಲಾ ಅವರು ಮಾಹಿತಿ ನೀಡಿದ್ದಾರೆ.ಮೈಸೂರಿನಲ್ಲಿ ವರ್ತುಲ ರಸ್ತೆ ನಿರ್ಮಾಣ: ಜನವರಿಯಲ್ಲಿ ಟೆಂಡರ್- ಸಂಸದ ಪ್ರತಾಪ್ ಸಿಂಹ

ಪ್ರಮಾಣವಚನ ಕಾರ್ಯಕ್ರಮವು ನಾಳೆಯೇ ( ಡಿ 11)ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಲಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಾತ್ರ ನಾಳೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಉಳಿದಂತೆ ಸಚಿವ ಸಂಪುಟ ರಚನೆಯು ಮುಂದಿನ ದಿನಗಳಲ್ಲಿ ನಡೆಯಲಿದೆ.

Share This Article
Leave a comment