ನಮಗೆ ಹಿಜಾಬ್ (hijab) ಮುಖ್ಯ : ಕೋರ್ಟ್​​ ತೀರ್ಪಿನ ತಕ್ಷಣ ಪರೀಕ್ಷೆ ಧಿಕ್ಕರಿಸಿ ಕಾಲೇಜಿನಿಂದ ಮನೆಗೆ ತೆರಳಿದ ವಿದ್ಯಾರ್ಥಿನಿಯರು

Team Newsnap
1 Min Read

ಹಿಜಾಬ್ (hijab) ಕುರಿತಂತೆ ಹೈಕೋಟ್೯ ಸ್ಷಷ್ಟ ತೀರ್ಪು ನೀಡಿದ ಬೆನ್ನಲ್ಲೇ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಬಿಟ್ಟು ಮನೆಗೆ ತೆರಳಿದ ಘಟನೆ ಯಾದಗಿರಿ ಜಿಲ್ಲೆಯ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜ್​​ನಲ್ಲಿ ನಡೆದಿದೆ.

ಹಿಜಾಬ್ (hijab) ವಿವಾದ ಕುರಿತಂತೆ ಇಂದು ರಾಜ್ಯ ಹೈಕೋರ್ಟ್ ನ ​​ ತ್ರಿಸದಸ್ಯ ಪೀಠ ಸರ್ಕಾರದ ಆದೇಶವನ್ನು ಎತ್ತಿ ಹಿಡಿದೆ.

ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಕೋರ್ಟ್​ ಆದೇಶವನ್ನು ಪಾಲಿಸಿ, ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಗೈರು ಹಾಜರಿ ಆಗಬೇಡಿ ಎಂದು ಮನವಿ ಮಾಡಿದ್ದರೂ ವಿದ್ಯಾಥಿ೯ಯರು ಕ್ಯಾರೆ ಎನ್ನದೇ ಕಾಲೇಜು ಬಿಟ್ಟು ಹೋದರು

ಸುರಪುರ ತಾಲೂಕಿನ ಕೆಂಬಾವಿ ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಪೂರ್ವಭಾವಿ ಪರೀಕ್ಷೆ ನಿಗದಿಯಾಗಿತ್ತು. ಹಿಜಾಬ್ ಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬಿಟ್ಟು ಹೊರ ನಡೆದಿದ್ದಾರೆ.

ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನ 08 ವಿದ್ಯಾರ್ಥಿಗಳು ಬೆಳಗ್ಗೆಯಿಂದ ಕೋರ್ಟ್​ ತೀರ್ಪಿಗಾಗಿ ಕಾಲೇಜು ಬಳಿ ಆಗಮಿಸಿ ಕಾಯುತ್ತಿದ್ದರು. ಕೋರ್ಟ್​ ತೀರ್ಪಿನ ಬಂದ ಬಳಿಕ ಹಿಜಾಬ್ ಬಿಟ್ಟು ನಾವು ತರಗತಿಗೆ ಬರೋದಿಲ್ಲ ಎಂದು ಹೇಳಿ ಮನೆಗೆ ತೆರಳಿದ್ದಾರೆ.

Share This Article
Leave a comment