6 ವಿದ್ಯಾರ್ಥಿನಿಯರು ಹಠ ಮಾಡದೇ ಕಾಲೇಜಿಗೆ ಬರಲಿ : ಸಮವಾದ ಶಿಕ್ಷಣ ನೀಡುತ್ತೇವೆ- ರಘುಪತಿ ಭಟ್

Team Newsnap
1 Min Read

ಉಡುಪಿಯ ಆ ಆರು ವಿದ್ಯಾರ್ಥಿನಿಯರು ಹಠ ಮಾಡದೇ ಕಾಲೇಜಿಗೆ ಬರಬೇಕು.

ಅವರೆಲ್ಲರಿಗೂ ಸಮವಾದ ಶಿಕ್ಷಣ ನೀಡುತ್ತೇವೆ. ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ರೆ, ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದು ಉಡುಪಿಯ ಶಾಸಕ ರಘುಪತಿ ಭಟ್ ಹೇಳಿದರು

ಹಿಜಾಬ್ ಕುರಿತಂತೆ ಹೈಕೋರ್ಟ್ ತೀರ್ಪು ಬಳಿಕ ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಘುಪತಿ ಭಟ್ ಅವರು, ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ ಮತ್ತು ಸಂತೋಷ ವ್ಯಕ್ತಪಡಿಸುತ್ತೇನೆ. ತ್ರೀ-ಸದಸ್ಯ ಪೀಟದ ತೀರ್ಪನ್ನು ಎಲ್ಲರೂ ಪಾಲಿಸಬೇಕು ಹೇಳಿದರು

ತ್ರಿ ಸದಸ್ಯ ಪೀಠ ವಿಚಾರಣೆ ಮಾಡಿ ತೀರ್ಪು ನೀಡಿದೆ. ತ್ರಿ ಸದಸ್ಯ ಪೀಠದಲ್ಲಿ ಮುಸ್ಲಿಂ ನ್ಯಾಯಾಧೀಶರೂ ಇದ್ದರು. ಇದು ಐತಿಹಾಸಿಕ ತೀರ್ಪು ಆಗಿದೆ. ಸುಪ್ರೀಂಕೋರ್ಟ್ ‍ಗೆ ಹೋಗಲು ಅವಕಾಶ ಇದೆ. ಆದರೆ ದೇಶ ಮಟ್ಟದಲ್ಲಿ ಮತ್ತೆ ಈ ವಿಚಾರ ತೆಗೆದುಕೊಂಡು ಹೋಗಿ ಹಿಂದೂ-ಮುಸ್ಲಿಂರ ಮಧ್ಯೆ ಕಂದಕ ಮೂಡಿಸಬಾರದು ಎಂದಿದ್ದಾರೆ.

Share This Article
Leave a comment