ಗೀತಂ ಯೂನಿವರ್ಸಿಟಿ ಹಾಸ್ಟೆಲ್ನ 6 ನೇ ಮಹಡಿಯಿಂದ ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿಯಲ್ಲಿ ನಡೆದಿದೆ. ಉಗಾಂಡ ಮೂಲದ ಹಸೀನಾ (24) ಮೃತ ದುರ್ದೈವಿ.
ಗೀತಂ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದರು. ರಾತ್ರಿ 11 ಗಂಟೆ ಸುಮಾರಿಗೆ 6ನೇ ಮಹಡಿಯಿಂದ ಮೊದಲನೇ ಮಹಡಿಗೆ ವಿದ್ಯಾರ್ಥಿನಿ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ.
ವಿದ್ಯಾರ್ಥಿನಿ ಸಾವಿನ ಬೆನ್ನಲ್ಲೇ ಅಲ್ಲಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ವಿವಿ ಕಟ್ಟಡದ ಗ್ಲಾಸ್ಗಳನ್ನು ಪುಡಿಪುಡಿ ಮಾಡಿದ್ದಾರೆ. ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆದು ಪುಡಿ ಪುಡಿ ಮಾಡಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಅನ್ನುವ ಶಂಕೆಯೂ ಇದೆ.
- ಅಕ್ರಮ ಪ್ರವೇಶ : ಪಾಕಿಸ್ತಾನ ಡ್ರೋನ್ ಹೊಡೆದುರುಳಿಸಿದ ಭಾರತದ ಗಡಿ ಭದ್ರತಾ ಪಡೆ
- PSI ನೇಮಕಾತಿ ಅಕ್ರಮ : ಶಾಂತ- ರವೀಂದ್ರ ಎಸ್ಕೇಪ್ – ಸಿಡಿಐಗೆ ಇವರನ್ನು ಪತ್ತೆ ಮಾಡುವುದೇ ಸವಾಲು
- ಶಾಸಕ ಜಿ ಟಿ ಡಿಯನ್ನು ಪಕ್ಷದಲ್ಲಿ ಉಳಿಸುತ್ತೇನೆ : 2 ಕಂಡಿಷನ್ ಗೆ ಒಪ್ಪುತ್ತೀರಾ – ಸಿ ಎಸ್ ಪುಟ್ಟರಾಜು
- ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು
- ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್ ನ ಒಂದೇ ಕುಟುಂಬದ 7 ಜನ ದುರಂತ ಸಾವು
More Stories
ಅಕ್ರಮ ಪ್ರವೇಶ : ಪಾಕಿಸ್ತಾನ ಡ್ರೋನ್ ಹೊಡೆದುರುಳಿಸಿದ ಭಾರತದ ಗಡಿ ಭದ್ರತಾ ಪಡೆ
PSI ನೇಮಕಾತಿ ಅಕ್ರಮ : ಶಾಂತ- ರವೀಂದ್ರ ಎಸ್ಕೇಪ್ – ಸಿಡಿಐಗೆ ಇವರನ್ನು ಪತ್ತೆ ಮಾಡುವುದೇ ಸವಾಲು
ವೈದ್ಯರ ನಿರ್ಲಕ್ಷ್ಯ : 19 ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಸಾವು