ಮೈಷುಗರ್ ಕಾರ್ಖಾನೆಯ ಆರಂಭಕ್ಕೆ ಚಾಲನೆ ನೀಡಲು ಜಿಲ್ಲಾ ಮಂತ್ರಿಗಳಿಂದ ಭರದ ಸಿದ್ದತೆ

Team Newsnap
1 Min Read

ಮಂಡ್ಯ ಮೈಷುಗರ್ ಕಾರ್ಖಾನೆಯ ಆರಂಭಕ್ಕೆ ಚಾಲನೆ ನೀಡುವ ಸಲುವಾಗಿ ಜಿಲ್ಲಾ ಮಂತ್ರಿ ಗೋಪಾಲಯ್ಯ ಮೈಷುಗರ್ ಕಾರ್ಖಾನಗೆ ಭೇಟಿ ನೀಡಿದರು.

ಕಾರ್ಖಾನೆಯ ನಾನಾ ವಿಭಾಗಗಳಿಗೆ ಭೇಟಿ ನೀಡಿ ಅವುಗಳ ಕಾರ‍್ಯವೈಖರಿ ಮತ್ತು ಯಂತ್ರೋಪಕರಣಗಳ
ಸ್ಥಿತಿ ಗತಿ ಬಗ್ಗೆ ಮಾಹಿತಿ ಪಡೆದ ಸಚಿವರು ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

ಕಾರ್ಖಾನೆ ಪುನಾರಂಭಕ್ಕೆ ಈಗಾಗಲೇ ನಿರ್ಧರಿಸಲಾಗಿದೆ ಯಂತ್ರೋಪಕರಣಗಳ ದುರಸ್ತಿಗೆ ಬಜೆಟ್‌ನಲ್ಲಿ 50 ಕೋಟಿ ರೂ. ಘೋಷಿಸಿದೆ. ಶತಾಯಗತಾಯ ಈ ವರ್ಷವೇ ಕಾರ್ಖಾನೆಯು ಪುನಾರಂಭಗೊಳ್ಳಲಿದೆ ಎಂದರು.

ಕ್ರೀಡಾ ಮತ್ತು ರೇಷ್ಮೆಖಾತೆ ಸಚಿವ ಕೆ.ಸಿ.ನಾರಾಯಣಗೌಡ, ಮೈಶುಗರ್‌ ಅಧ್ಯಕ್ಷ ಶಿವಲಿಂಗೇಗೌಡ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರು, ಬಿಜೆಪಿ ಮುಖಂಡ ಸಿದ್ದರಾಮಯ್ಯ ಇತರರು ಭಾಗವಹಿಸಿದ್ದರು.

ತಾಲೂಕುಮಟ್ಟದ ಸಮಾವೇಶ :

ಬಿಜಿಪಿ ಪಕ್ಷದ ಬಲವರ್ಧನೆಗಾಗಿ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲೂ ನಿರಂತರವಾಗಿ ಬಿಜೆಪಿ ಸಮಾವೇಶಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 1ರಂದು ಮದ್ದೂರಿನಿಂದ ಸಮಾವೇಶ ಆರಂಭವಾಗಲಿದೆ. ಮೂರ್ನಾಲ್ಕು ದಿನಗಳೂ ನಿತ್ಯ ಎರಡು ಸಮಾವೇಶಗಳನ್ನು ನಡೆಸಲಾಗುವುದು. ಮೇ 18ರ ನಂತರ ಕೇಂದ್ರದ ನಾಯಕರನ್ನು ರಾಜ್ಯಕ್ಕೆ ಕರೆಸಿ ಸಭೆಗಳನ್ನು ಮಾಡಲಾಗುವುದು ಎಂದರು

ಜಿಲ್ಲೆಯ 2.80 ಲಕ್ಷಕ್ಕೂ ಅಧಿಕ ರೈತರ ಖಾತೆಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು 10,000 ರೂ. ನೀಡಿವೆ. ಹೀಗೆ ರಾಜ್ಯದ 52 ಲಕ್ಷಕ್ಕೂ ಅಧಿಕ ರೈತರು ಪ್ರಯೋಜನ ಪಡೆದಿದ್ದಾರೆ ಎಂದರು.

Share This Article
Leave a comment